INDvsEND 1st Test: 2ನೇ ಇನ್ನಿಂಗ್ಸ್‌ನಲ್ಲಿ ಬಳಲಿದ ಭಾರತ - ಇಂಗ್ಲೆಂಡ್‌ಗೆ 28 ರನ್‌ಗಳಿಂದ ಗೆಲುವು

INDvsEND 1st Test: 2ನೇ ಇನ್ನಿಂಗ್ಸ್‌ನಲ್ಲಿ ಬಳಲಿದ ಭಾರತ - ಇಂಗ್ಲೆಂಡ್‌ಗೆ 28 ರನ್‌ಗಳಿಂದ ಗೆಲುವು

ಹೈದರಾಬಾದ್‌: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವೈಫಲ್ಯ ಎದುರಿಸಿದ ಭಾರತ ತಂಡವು 28 ರನ್‌ಗಳಿಂದ ಸೋಲು ಕಂಡಿದೆ. 

ಹೈದರಾಬಾದ್‌ನಲ್ಲಿ ನಡೆದ ಭಾರತದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್‌ ಗಳಿಸಿ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತವು 436 ರನ್‌ ಗಳಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 420 ರನ್‌ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತವು 202 ರನ್‌ ಗಳಿಸಿ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್‌ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. 

ಸಂಕ್ಷಿಪ್ತ ಸ್ಕೋರ್‌ ವಿವರ: 

ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ : 64.3 ಓವರ್‌ಗಳಲ್ಲಿ 246/10 

ಭಾರತದ ಮೊದಲ ಇನ್ನಿಂಗ್ಸ್‌: 121 ಓವರ್‌ಗಳಲ್ಲಿ 436/10 

ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌: 102.1 ಓವರ್‌ಗಳಲ್ಲಿ 420/10 

ಭಾರತದ ಎರಡನೇ ಇನ್ನಿಂಗ್ಸ್‌: 69.2 ಓವರ್‌ಗಳಲ್ಲಿ 202/10