ಫ್ರಾನ್ಸ್ ಪ್ರಧಾನಿ ಸ್ಥಾನ ಅಲಂಕರಿಸಿದ ಸಲಿಂಗಕಾಮಿ ಗೇಬ್ರಿಯಲ್ ಅಟಲ್

ಫ್ರಾನ್ಸ್ ಪ್ರಧಾನಿ ಸ್ಥಾನ ಅಲಂಕರಿಸಿದ ಸಲಿಂಗಕಾಮಿ ಗೇಬ್ರಿಯಲ್ ಅಟಲ್

ಫ್ರಾನ್ಸ್ನ ನೂತನ ಪ್ರಧಾನಿಯಾಗಿ ಗೇಬ್ರಿಯಲ್ ಅಟಲ್ ಅವರನ್ನು ನೇಮಕ ಮಾಡಲಾಗಿದೆ. ಇಂದು ಬೆಳಿಗ್ಗೆ ಎಲಿಜಬೆತ್ ಬೋರ್ನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಇವರ ಸ್ಥಾನಕ್ಕೆ ಗೇಬ್ರಿಯಲ್ ಅಟಲ್ ಅವರನ್ನು ಆಯ್ಕೆ ಮಾಡಲಾಗಿದೆ. 

34 ವರ್ಷದ ಗೇಬ್ರಿಯಲ್ ಅಟಲ್ ಕಿರಿಯ ಹಾಗೂ ಮೊದಲ ಬಾರಿಗೆ ಸಲಿಂಗಕಾಮಿಯೊಬ್ಬರು ಫ್ರಾನ್ಸ್ ದೇಶದ ಪ್ರಧಾನಿಯಾಗಿದ್ದಾರೆ. ಈ ಬದಲಾವಣೆ ಚುನಾವಣೆಗೆ 3 ವರ್ಷ ಇರುವಾಗಲೇ ನಡೆದಿರುವುದು ಫ್ರಾನ್ಸ್ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.