ಹುಬ್ಬಳ್ಳಿ : ಪಾಟಾ ಮುರಿದು ಹಳ್ಳಕ್ಕೆ ಬಿದ್ದ ಬಸ್! ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಸರ್ಕಾರಿ ಬಸ್ಸಿನ ಪಾಟಾ ಮುರಿದು ಹಳ್ಳಕ್ಕೆ ಉರುಳಿ ಬಿದ್ದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಹಳ್ಳದ ಬಳಿ ನಡೆದಿದೆ. ಹುಬ್ಬಳ್ಳಿ- ಬ್ಯಾಹಟ್ಟಿ ಸರ್ಕಾರಿ ಬಸ್ಸೆ ಹಳ್ಳಕ್ಕೆ ಉರುಳಿ ಬಿದಿದ್ದು, ಹುಬ್ಬಳ್ಳಿಯಿಂದ ಬ್ಯಾಹಟ್ಟಿ ಕಡೆಗೆ ಪ್ರಯಾಣಿಕರನ್ನು ಕರೆಹೊಯ್ಯುವ ಸಂದರ್ಭದಲ್ಲಿ ಏಕಾಏಕಿ ಬಸ್ಸಿನ ಪಾಟಾ ಕಟ್ ಆಗಿದ್ದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಹಳ್ಳಕ್ಕೆ ಉರುಳಿದೆ. ಅದೃಷ್ಟವಶಾತ ಪ್ರಯಾಣಿಕರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.