BREAKING : ರಾಜಸ್ಥಾನಕ್ಕೆ ನೂತನ ಮುಖ್ಯಮಂತ್ರಿ ಹೆಸರು ಪ್ರಕಟ - ಭಜನ್ ಲಾಲ್ ಶರ್ಮಾ ಸರ್ವಾನುಮತದಿಂದ ಆಯ್ಕೆ

BREAKING : ರಾಜಸ್ಥಾನಕ್ಕೆ ನೂತನ ಮುಖ್ಯಮಂತ್ರಿ ಹೆಸರು ಪ್ರಕಟ - ಭಜನ್ ಲಾಲ್ ಶರ್ಮಾ ಸರ್ವಾನುಮತದಿಂದ ಆಯ್ಕೆ

ಜೈಪುರ್ : ರಾಜಸ್ಥಾನದ ನೂತನ ಮುಖ್ಯಮಂತ್ರಿಯ ಹೆಸರನ್ನು ಪ್ರಕಟಿಸಲಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಜನ್ ಲಾಲ್ ಶರ್ಮಾ ಅವರ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. 

ಭಜನ್ ಲಾಲ್ ಶರ್ಮಾ ಮೊದಲ ಬಾರಿಗೆ ಶಾಸಕರಾಗಿದ್ದಾರೆ. 4 ಬಾರಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಂಘಟನೆಯಲ್ಲಿ ಅವರ ಪ್ರಮುಖ ಪಾತ್ರವನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಬಹುದೊಡ್ಡ ಜವಾಬ್ದಾರಿ ನೀಡಲಾಗಿದೆ. ರಾಜಸ್ಥಾನದಲ್ಲೂ ಎರಡು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ದಲಿತ ಸಮುದಾಯ ಪ್ರೇಮ್ ಚಂದ್ ಬೈರವಾ ಹಾಗೂ ರಜಪೂತ ಸಮುದಾಯದ ದಿಯಾ ಕುಮಾರಿ ಡಿಸಿಎಂ ಆಗಲಿದ್ದಾರೆ. 

ಇನ್ನು ಸ್ಪೀಕರ್ ಆಗಿ ವಾಸುದೇವ ದೇವನಾನಿ ಅವರನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ಹೈಕಮಾಂಡ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸರೋಜ್ ಪಾಂಡೆ ಮತ್ತು ವಿನೋದ್ ತಾವ್ಡೆ ಅವರನ್ನು ವೀಕ್ಷಕರಾಗಿ ಜೈಪುರಕ್ಕೆ ಕಳುಹಿಸಿತ್ತು.