ಬಿರುಸುಗೊಂಡ ಮೊದಲ ಹಂತದ ಲೋಕಸಭಾ ಚುನಾವಣಾ ಮತದಾನ - ಹಕ್ಕು ಚಲಾಯಿಸಿದ ರಜನಿಕಾಂತ್, ಅಣ್ಣಾಮಲೈ, ಮೋಹನ್ ಭಾಗವತ್

ಬಿರುಸುಗೊಂಡ ಮೊದಲ ಹಂತದ ಲೋಕಸಭಾ ಚುನಾವಣಾ ಮತದಾನ - ಹಕ್ಕು ಚಲಾಯಿಸಿದ ರಜನಿಕಾಂತ್, ಅಣ್ಣಾಮಲೈ, ಮೋಹನ್ ಭಾಗವತ್

ಲೋಕಸಭೆಯ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಆರಂಭವಾಗಿದೆ. 21 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಮೊದಲ ಹಂತದ ಮತದಾನದಲ್ಲಿ 102 ಸ್ಥಾನಗಳಲ್ಲಿ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ 134 ಮಹಿಳಾ ಅಭ್ಯರ್ಥಿಗಳು ಮತ್ತು 1491 ಪುರುಷ ಅಭ್ಯರ್ಥಿಗಳಾಗಿದ್ದಾರೆ. 

ಇನ್ನು, ನಾಗಪುರದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಮಧ್ಯಪ್ರದೇಶದಲ್ಲಿ ಮಾಜಿ ಸಿಎಂ ಕಮಲ್‌ ನಾಥ್‌, ಅವರ ಪುತ್ರ ನಕುಲ್‌ ನಾಥ್‌, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌, ನಟ ರಜನಿಕಾಂತ್‌, ಬಿಜೆಪಿ ಮುಖಂಡ ಅಣ್ಣಾಮಲ್ಲೈ, ಕಾಂಗ್ರೆಸ್‌ ನಾಯಕ ಚಿದಂಬಂರಂ ಸೇರಿದಂತೆ ಹಲವಾರು ಗಣ್ಯರು ಮತದಾನ ಮಾಡಿದರು. 

ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು 16.63 ಕೋಟಿಗೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ. ಈ ಕ್ಷೇತ್ರಗಳಿಂದ ಅದೃಷ್ಟ ಪರೀಕ್ಷೆಗೆ ಇಳಿದವರಲ್ಲಿ ಎಂಟು ಮಂದಿ ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ರಾಜ್ಯಪಾಲೆ ಕೂಡ ಇದ್ದಾರೆ. ಮತದಾನವು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಸಂಜೆ 6ಕ್ಕೆ ಮುಕ್ತಾಯವಾಗಲಿದೆ.