ಸಿಂಘು ಗಡಿ ಕೊಲೆ ಪ್ರಕರಣಕ್ಕೂ ರೈತ ಸಂಘಟನೆಗೂ ಸಂಬಂಧವಿಲ್ಲ: ಕಿಸಾನ್ ಮೋರ್ಚಾ

ಸಿಂಘು ಗಡಿ ಕೊಲೆ ಪ್ರಕರಣಕ್ಕೂ ರೈತ ಸಂಘಟನೆಗೂ ಸಂಬಂಧವಿಲ್ಲ: ಕಿಸಾನ್ ಮೋರ್ಚಾ

ನವದೆಹಲಿ: ಸಿಂಘು ಗಡಿಯಲ್ಲಿ ನಡೆದ ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಆದ್ರೆ ಇದಕ್ಕೂ ರೈತ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಕಿಸಾನ್ ಮೋರ್ಚಾ ಸ್ಪಷ್ಟನೆ ನೀಡಿದೆ. ಸಿಂಘುಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಈ ಕೊಲೆಗೂ ತಮ್ಮ ಸಂಘಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕೊಲೆ ಪ್ರಕರಣದಲ್ಲಿ ಕೇಳಿಬರುತ್ತಿರುವ ನಿಹಂಗ್ ಸಿಖ್ ಸಮುದಾಯವಾಗಲೀ ಅಥವಾ ಕೊಲೆಯಾದ ವ್ಯಕ್ತಿಯಾಗಲಿ ತಮ್ಮ ಸಂಘಟನೆಗೆ ಸೇರಿದವರಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸ್ಪಷ್ಟನೆ ನೀಡಿದೆ. ಆ ಮೂಲಕ ಕೊಲೆ ಪ್ರಕರಣದಿಂದ ಕಿಸಾನ್ ಮೋರ್ಚಾ ದೂರ ಉಳಿದಿದೆ. ಈ ನಡುವೆ ಈ ಕೊಲೆಯ ಹಿಂದೆ ನಿಹಾಂಗ್ ಸಿಖ್ ಸಮುದಾಯದ ಕೆಲವರ ಕೈವಾಡ ಇದೆ ಎಂಬ ಶಂಕೆ ಇದೆ.