ಮೊದಲ ಹಂತದ ತರಬೇತಿ; ವಿಧಾನ ಸಭೆ ಚುನಾವಣೆ ಸಿದ್ಧತೆ ಆರಂಭಿಸಿದ ಆಯೋಗ

ಮೊದಲ ಹಂತದ ತರಬೇತಿ; ವಿಧಾನ ಸಭೆ ಚುನಾವಣೆ ಸಿದ್ಧತೆ ಆರಂಭಿಸಿದ ಆಯೋಗ

ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇರುವ ಮುನ್ನವೇ ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. 

ಚುನಾವಣೆ ಪ್ರಕ್ರಿಯೆ ಕುರಿತು ಮಾಸ್ಟರ್ ತರಬೇತುದಾರರಾಗಿ ಕೆಳಹಂತದ ಅಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ 54 ಅಧಿಕಾರಿಗಳಿಗೆ ಮೇ 9ರಿಂದ 14 ರವರೆಗೆ ದೆಹಲಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಐದು ಹಂತಗಳಲ್ಲಿ ಅಧಿಕಾರಿಗಳಿಗೆ ತರಬೇತಿ ನಡೆಯಲಿದೆ. ಈ ಪಟ್ಟಿ ಹೊರಬೀಳುತ್ತಿದ್ದಂತೆ ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಎದುರಾಗಲಿದೇಯೆ ಎಂಬ ಚರ್ಚೆ ಹುಟ್ಟುಹಾಕಿದೆ. 

ಚುನಾವಣೆಗೆ ಸ್ಪರ್ಧಿಸುವವರ ಅರ್ಹತೆಗಳು, ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂಪಡೆಯುವುದು, ಚಿಹ್ನೆಗಳ ಹಂಚಿಕೆ, ಮತದಾನ ಸಿದ್ಧತೆ, ಮಾದರಿ ನೀತಿ ಸಂಹಿತೆ ಅನುಷ್ಠಾನ, ಚುನಾವಣಾ ವೆಚ್ಚದ ಮೇಲೆ ನಿಗಾ, ಸಮಸ್ಯೆ ಗುರುತಿಸುವುದು‌ ಸೇರಿದಂತೆ ಹಲವು ವಿಷಯಗಳ ಬಗ್ಗೆ ತರಬೇತಿ ನಡೆಯಲಿದೆ.