ಹುಬ್ಬಳ್ಳಿ: ಹಣ ದುಪ್ಪಟ್ಟು ಮಾಡಲು ನಂಬಿಸಿ ವೈದ್ಯರಿಗೆ 50 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಹಣ ದುಪ್ಪಟ್ಟು ಮಾಡಲು ನಂಬಿಸಿ ವೈದ್ಯರಿಗೆ 50 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ನಿವೃತ್ತ ವೈದ್ಯಾದಿಕಾರಿಗೆ 50 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. 

ಗೋಕುಲ ರುದ್ರಗಂಗಾ ಲೈಔಟ್ ನಿವಾಸಿ ಡಾಕ್ಟರ್ ಶೈಲಾ ಪಾಟೀಲ ಎಂಬುರಿಗೆ ವಂಚನೆಗೆ ಒಳಗಾದವರು. ನಿವೃತ್ತಿಯ ನಂತರ ಬಂದ ಹಣವನ್ನು ಸಂಗ್ರಹ ಮಾಡಿ ಇಡಲು ಯೋಚಿಸಿ ತಮ್ಮ ಸ್ನೇಹಿರಿಗೆ ತಿಳಿಸಿದ್ದರು. ಅವರ ಸ್ನೇಹಿತರು, ಇಲ್ಲಿನ ವಿದ್ಯಾನಗರದ ಬ್ಲಾಕ್ ಆಂಡ್ ವೈಟ್ ಫಿನ್ ಸೆಲ್ಯೂಷನ್‌ನ ಹಣ ಹೂಡಿಕೆ ಮಾಡಿ ಎಂದು ಸಲಹೆ ನೀಡಿದರು. ಇದರನ್ವಯ ಶೈಲಾ ಅವರು ಬ್ಲಾಕ್ ಆಂಡ್ ವೈಟ್ ಫಿನ್ ಸೆಲ್ಯೂಷನ್‌ನ ಸಿಇಒ ಮಣಿಕಂಠನ್ ನಾಯರ್ ಭೇಟಿಯಾಗಿ ಹಣವನ್ನು ನಂಬಿ ಅಲ್ಲಿ ಇಟ್ಟರು. ಆದರೆ ಮಣಿಕಂಠನ್ ನಾಯರ್ ಮತ್ತು ಅವರ ತಾಯಿ ಕುಟತ್ ಗೋಪಾಲ ನಾಯರ ಎಂಬುವರು ಸೇರಿಕೊಂಡು ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಈಗ ಹಣ ನೀಡದೆ ವಂಚಿಸಿದ್ದಾರೆ. ಈ ಕುರಿತು ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.