ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ದೆಹಲಿ ವಿಧಾನಸಭೆ ಸ್ಪೀಕರ್‌

ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ದೆಹಲಿ ವಿಧಾನಸಭೆ ಸ್ಪೀಕರ್‌

ನವದೆಹಲಿ: ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರು ಧ್ವನಿ ಮತದ ಮೂಲಕ ನೂತನ ದೆಹಲಿ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. 

ಈ ಕುರಿತಂತೆ ಗುಪ್ತಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಇಂದು ನಾನು ಮೂರನೇ ಬಾರಿಗೆ ದೆಹಲಿ ವಿಧಾನಸಭೆಯ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದಿದ್ದಾರೆ. 

ಇನ್ನು ವಿಜೇಂದ‌ರ್ ಗುಪ್ತಾ ಆಯ್ಕೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಅತಿಶಿ ಅವರು ಸ್ಪೀಕರ್ ಆಗಿ ಆಯ್ಕೆಯಾದ ಗುಪ್ತಾ ಅವರನ್ನು ಅಭಿನಂದಿಸಿದರು.