PSI ಪರೀಕ್ಷಾ ಅಕ್ರಮ-ಬಿಜೆಪಿ ನಾಯಕಿ ಮನೆ ಮೇಲೆ CID ದಾಳಿ

ಕಲಬುರಗಿ: 545 ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಬಿಜೆಪಿಯ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯ ಹಾಗರಗಿ ಅವರ ನಗರದ ಹಳೆ ಜೇವರ್ಗಿ ರಸ್ತೆಯ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ, ದಾಳಿ ನಡೆದ ವೇಳೆ ಮನೆ ಭಾಗಿಲು ಹಾಕಲಾಗಿತ್ತು. ಆಗ ದಿವ್ಯ ಹಾಗರಗಿ ಪತಿ ರಾಜೇಶ್ ಹಾಗರಗಿ ಅವರನ್ನ ವಿಚಾರಿಸಲಾಗಿದ್ದು ನಾನು ಹೊಲದಲ್ಲಿಯೇ ಇರುತ್ತೇನೆ ಎಂದು ಹಾರಿಕೆ ಉತ್ತರ ಕೊಟ್ಟಿದ್ದಾರೆ. ಆದರೆ, ಬಳಿಕ ಅಧಿಕಾರಿಗಳು ಮನೆ ಬೀಗ ತೆಗೆದು ಮನೆಯನ್ನ ಶೋಧ ನಡೆಸಿ ದಾಖಲೆ ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಪರೀಕ್ಷಾ ಕೇಂದ್ರವಾಗಿದ್ದ ಗೋಕುಲ ನಗರದಲ್ಲಿರುವ ಜ್ಞಾನಜ್ಯೋತಿ ಸ್ಕೂಲ್,ದಿವ್ಯಾ ಹಾಗರಗಿ ಒಡತನಕ್ಕೆ ಸೇರಿದೆ.