ಪೆಟ್ರೋಲ್ ಡೀಸೆಲ್ ಮಾರಾಟಕ್ಕೆ GST-ಪೆಟ್ರೋಲಿಯಮ್ ಸಚಿವ ಹರದೀಪ್ ಸಿಂಗ್

ಪೆಟ್ರೋಲ್ ಡೀಸೆಲ್ ಮಾರಾಟಕ್ಕೆ GST-ಪೆಟ್ರೋಲಿಯಮ್ ಸಚಿವ ಹರದೀಪ್ ಸಿಂಗ್

ಶ್ರೀನಗರ: ತೈಲ ಮಾರುಕಟ್ಟೆ ಹಾಗೂ ಮಾರಾಟದ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ಹಾಕಲು ಕೇಂದ್ರ ಸರಕಾರ ಸಿದ್ಧವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ. 

ಶ್ರೀನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂಧನ ವ್ಯವಹಾರವನ್ನು GST ವ್ಯಾಪ್ತಿಗೆ ತರಬೇಕಾದರೆ ರಾಜ್ಯ ಸರಕಾರಗಳ ಅನುಮತಿ ಬೇಕಾಗುತ್ತದೆ. ರಾಜ್ಯಗಳ ಒಪ್ಪಿಗೆ ಸಿಕ್ಕ ಮೇಲೆ ನಾವು ಯಾವ ರೀತಿ ಪೆಟ್ರೋಲ್ ಡೀಸೆಲ್ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂಬ ಬಗ್ಗೆ ಯೋಚಿಸಲಿದ್ದೇವೆ. ಈ ಎಲ್ಲ ಪ್ರಕ್ರಿಯೆಯನ್ನು ಹಣಕಾಸು ಸಚಿವರೇ ನಿರ್ಧರಿಸಬೇಕು. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರಗಳು ಸಮ್ಮತಿಸುವ ಸಾಧ್ಯತೆ ಬಹಳ ಕಡಿಮೆ ಇದೆ. ಯಾಕೆಂದರೆ ಇಂಧನ ಮತ್ತು ಮದ್ಯ ಮಾರಾಟವೇ ಅವುಗಳ ಆದಾಯದ ಪ್ರಮುಖ ಮೂಲಗಳು. ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಿಲ್ಲ. ಯಾರಾದರೂ ತಮ್ಮ ಆದಾಯದ ಮೂಲವನ್ನು ಬಿಟ್ಟುಕೊಡುತ್ತಾರೆಯೇ? ಹಣದುಬ್ಬರ ಮತ್ತು ಇತರ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ತಲೆ ಕೆಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.