ಬಜೆಟ್ ಮಂಡನೆ ಅಂತ್ಯ: ಲೋಕಸಭೆ ಕಲಾಪ ನಾಳೆ ಸಂಜೆ 4.30ಕ್ಕೆ ಮುಂದೂಡಿಕೆ

ಬಜೆಟ್ ಮಂಡನೆ ಅಂತ್ಯ: ಲೋಕಸಭೆ ಕಲಾಪ ನಾಳೆ ಸಂಜೆ 4.30ಕ್ಕೆ ಮುಂದೂಡಿಕೆ

ನವದೆಹಲಿ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 1 ಗಂಟೆ 33 ನಿಮಿಷಗಳ ಕಾಲ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಮಾಡಿದ್ದಾರೆ. ಸದ್ಯ ಲೋಕಸಭೆಯ ಬಜೆಟ್ ಕಲಾಪ ಮುಗಿದಿದ್ದು ನಾಳೆ ಸಂಜೆ 4.30ಕ್ಕೆ ಕಲಾಪವನ್ನು ಸ್ಪೀಕರ್ ಮುಂದೂಡಿದ್ದಾರೆ. ಇನ್ನು ಬಜೆಟ್ ಮಂಡನೆ ಕೊನೆಯ ನಿಮಿಷಗಳ ಅಪ್‌ಡೇಟ್ಸ್ ಹೀಗಿದೆ.. ನವೋದ್ಯಮಗಳಿಗೆ(ಸ್ಟಾರ್ಟ್‌ಅಪ್ಸ್) ಇನ್ನೂ ಒಂದು ವರ್ಷ ತೆರಿಗೆ ವಿನಾಯಿತಿ ನೀಡಲಾಗಿದೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಈ ಬಾರಿಯ ಬಜೆಟ್‌ನಲ್ಲಿ ನವೋದ್ಯಮಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ. ದೇಶದಲ್ಲಿ ಹೊಸ ರಿಟರ್ನ್ಸ್ ಪರಿಚಯ ಮಾಡಲು ಕೇಂದ್ರ ನಿರ್ಧರಿಸಿದೆ. ತೆರಿಗೆ ಪಾವತಿ, ರಿಟರ್ನ್ಸ್ ಪಾವತಿಗೆ ಹೊಸ ನೀತಿ ಜಾರಿಮಾಡಲಾಗುವುದು. ತೆರಿಗೆ ಸಲ್ಲಿಕೆ ವೇಳೆ ಸಮಸ್ಯೆ ಕಂಡು ಬಂದರೆ ತಪ್ಪು ಸರಿಪಡಿಸಲು 2 ವರ್ಷಗಳವರೆಗೆ ಅವಕಾಶ ನೀಡಲಾಗಿದೆ. ದೇಶದ ತೆರಿಗೆ ಪದ್ಧತಿ ಹಾಗೂ ನೀತಿಗಳಲ್ಲಿ ಈ ಸಲ ಯಾವುದೇ ಬದಲಾವಣೆ ಜಾರಿ ಆಗಿಲ್ಲ.