ಬ್ರೇಕಿಂಗ್ : ಜಾತಿ ಜನಗಣತಿ ಯಾವುದೇ ನಿರ್ಣಯಕ್ಕೆ ಬಾರದೆ ಸಂಪುಟ ಸಭೆ ಮುಕ್ತಾಯ..!

ಬ್ರೇಕಿಂಗ್ : ಜಾತಿ ಜನಗಣತಿ ಯಾವುದೇ ನಿರ್ಣಯಕ್ಕೆ ಬಾರದೆ ಸಂಪುಟ ಸಭೆ ಮುಕ್ತಾಯ..!

ಬೆಂಗಳೂರು:ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಬಹು ನಿರೀಕ್ಷಿತ ಜಾತಿ ಜನಗಣತಿ ಕುರಿತು ಚರ್ಚೆ ನಡೆದಿದ್ದರೂ ಯಾವುದೇ ನಿರ್ಣಯಕ್ಕೆ ಬಾರದೆ ಸಭೆ ಕೊನೆಗೊಂಡಿದೆ. 

ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಎಲ್ಲ ಸಚಿವರಿಗೆ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ. 

ಚರ್ಚೆ ಅಪೂರ್ಣವಾಗಿದ್ದು, ಇದೊಂದು ದೊಡ್ಡ ಮತ್ತು ಸೂಕ್ಷ್ಮ ವಿಷಯವಾಗಿರುವುದರಿಂದ ಇನ್ನೂ ಹೆಚ್ಚಿನ ಹಾಗೂ ಆಳವಾದ ಚರ್ಚೆ ಅಗತ್ಯವಿದೆ ಎನ್ನಲಾಗಿದೆ. ಹೀಗಾಗಿ ಜಾತಿ ಗಣತಿ ಕುರಿತು ಅಂತಿಮ ತೀರ್ಮಾನವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಸರಕಾರ ಸ್ಪಷ್ಟಪಡಿಸಿದೆ.