ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್

ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ದೃಢಪಟ್ಟಿದೆ, ಈ ಬಗ್ಗೆ ಫಿಲ್ಮ್ ಇಂಫಾರ್ಮೇಷನ್ ಡಾಟ್ ಕಾಂ. ಸಂಪಾದಕ ಕೋಮಲ್ ನಹ್ತಾ ಅವರು ಈ ಬಗ್ಗೆ ಸೋಮವಾರ ರಾತ್ರಿ ಟ್ವಿಟ್ ಮಾಡಿದ್ದಾರೆ. ಹೀಗಾಗಿ ತಕ್ಷಣ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ.ಇದಕ್ಕಿಂತ ಮೊದಲು ಖುದ್ದು ನಟ ಸಂಜಯ್ ದತ್ ಅವರು ಟ್ವೀಟ್ ಮಾಡಿ ವೈದ್ಯಕೀಯ ಕಾರಣಗಳಿಗಾಗಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳಲಿದ್ದೇನೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ನನ್ನ ಜತೆ ಇದ್ದಾರೆ. ಅಭಿಮಾನಿಗಳಿಗೆ, ಹೃದಯಗಳು ಅನಗತ್ಯವಾಗಿ ಕಳವಳ ಪಡುವುದು ಬೇಡ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ ನಿಮ್ಮೆಲ್ಲರ ಅಭಿಮಾನ ಹಾರೈಕೆಗಳಿಂದ ಆದಷ್ಟು ಬೇಗ ಗುಣಮುಖನಾಗಿ ಬರಲಿದ್ದೇನೆ ಎಂದು ಬರೆದುಕೊಂಡಿದ್ದರು. ಆಗಸ್ಟ್ 8ರಂದು ಅವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು ಸದ್ಯ ಅವರು ಕನ್ನಡದಲ್ಲಿ ಕೆಜಿಎಫ್ ಚಪ್ಟರ್ ಟು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಈ ಸಿನೆಮಾದ ಪೋಸ್ಟರ್ ಸಂಜಯ್ ದತ್ ಅವರ ಹುಟ್ಟಿದ ದಿನ ಜು 29ರಂದು ಬಿಡುಗಡೆಯಾಗಿತ್ತು.