ರಾಜ್ಯಸಭಾ ಚುನಾವಣೆಗೆ ನಟ ಜಗ್ಗೇಶ್-ನಿರ್ಮಲಾ ಸೀತಾರಾಮನ್‌ಗೆ ಬಿಜೆಪಿ ಟಿಕೆಟ್ !

ಬೆಂಗಳೂರು:ಭಾರತೀಯ ಜನತಾ ಪಾರ್ಟಿ ಈಗ ರಾಜ್ಯ ಸಭಾ ಚುನಾವಣೆಗೆ ತಮ್ಮ ಇಬ್ಬರು ಅಭ್ಯರ್ಥಿಗಳ ಹೆಸರನ್ನ ಘೋಷಿಸಿದೆ. ಹೌದು. ಜೂನ್-10 ರಂದು ನಡೆಯೋ ರಾಜ್ಯ ಸಭಾ ಚುನಾವಣೆಗೆ ನವರಸನಾಯಕ ನಟ ಜಗ್ಗೇಶ್ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನ ಈಗ ಘೋಷಣೆ ಮಾಡಲಾಗಿದೆ.
ನಿರ್ಮಾಲಾ ಸೀತಾರಾಮನ್ ಅವರನ್ನ ಕರ್ನಾಟಕದಿಂದಲೇ ಮುಂದುವರೆಸಲು ನಿರ್ಧರಿಸಲಿದ್ದು, ಕೆ.ಸಿ.ರಾಮಮೂರ್ತಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಟ ಜಗ್ಗೇಶ್ ಅವರಿಗೆ ಅವಕಾಶ ನೀಡಲಾಗಿದೆ.
ರಾಜ್ಯದ ಕೋರ್ ಕಮೀಟಿ ನೀಡಿದ್ದ ಲಿಸ್ಟ್ ಅನ್ನ ಬಿಜೆಪಿ ಹೈಕಮಾಂಡ್ ಕೈಬಿಟ್ಟಿದ್ದು,ತನ್ನದೇ ಪ್ರತ್ಯೇಕ ನಿರ್ಧಾರವನ್ನ ಈಗ ಪ್ರಕಟಿಸಿದೆ.