ಬೆಂಗಳೂರು: ಪ್ರಜ್ವಲ್‌ಗೆ ಲುಕ್ ಔಟ್ ನೋಟೀಸ್ ಜಾರಿ - ರೇವಣ್ಣ ಇಂದು ವಿಚಾರಣೆಗೆ ಗೈರಾದರೆ ಬಂಧನ

ಬೆಂಗಳೂರು: ಪ್ರಜ್ವಲ್‌ಗೆ ಲುಕ್ ಔಟ್ ನೋಟೀಸ್ ಜಾರಿ - ರೇವಣ್ಣ ಇಂದು ವಿಚಾರಣೆಗೆ ಗೈರಾದರೆ ಬಂಧನ

ಬೆಂಗಳೂರು: ಪ್ರಜ್ವಲ್ ರೇವಣ್ಣ ವಿಡಿಯೋ‌ ಕೇಸ್‌ನಲ್ಲಿ ವಿಶೇಷ ತನಿಖಾ ತಂಡ ಲುಕ್ ಔಟ್ ನೋಟೀಸ್ ಜಾರಿ ಮಾಡಿದೆ. 

ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿ ಇರುವುದರಿಂದ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ನೀಡುವಂತೆ ತಮ್ಮ ವಕೀಲರ ಮೂಲಕ ಎಸ್ಐಟಿಗೆ ಮನವಿ ಮಾಡಿದ್ದರು. ಈ ಮನವಿಯನ್ನ ತಿರಸ್ಕರಿಸಿದ ತಂಡವು ಲುಕ್ ಔಟ್ ನೋಟೀಸ್ ಜಾರಿ ಮಾಡಿದೆ.‌ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೂ ಲುಕ್ ಔಟ್ ನೋಟೀಸ್ ರವಾನಿಸಲಾಗಿದ್ದು, ದೇಶಕ್ಕೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣನನ್ನ ವಶ‌ಕ್ಕೆ ಪಡೆಯುವ ಕೆಲಸವಾಗಲಿದೆ ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ. 

ಎಸ್ಐಟಿ ಮುಂದೆ ಹಾಜರಾಗದಿದ್ದರೆ ರೇವಣ್ಣ ಬಂಧನ ಸಾಧ್ಯತೆ: 
ಹೊಳೆನರಸಿಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ಹಾಗೂ ಎಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್ಐಟಿ ವಿಚಾರಣೆ ಹಾಜರಾಗಬೇಕೆಂದು ನಿನ್ನೆ ಐಪಿಸಿ ಸೆಕ್ಷನ್ 41_ರ ಅಡಿಯಲ್ಲಿ ನೋಟೀಸ್ ಜಾರಿ ಮಾಡಿತ್ತು‌. ಈ ಬಗ್ಗೆ ರೇವಣ್ಣ ಅವರು ವಿಚಾರಣೆ ಹಾಜರಾಗುವುದಾಗಿ ತಿಳಿಸಿದ್ದರು. ಒಂದು ವೇಳೆ ಇಂದು ವಿಚಾರಣೆಗೆ ಗೈರು ಹಾಜರಾದರೆ ಅವರನ್ನು ಬಂಧಿಸುವ ಕೆಲಸವನ್ನ ಎಸ್ಐಟಿ ಮಾಡಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.‌