ಬಿಹಾರ ಚುನಾವಣೆ ಫಲಿತಾಂಶ: ತೇಜಸ್ವಿ ಯಾದವ್‌ಗೆ 3230 ಮತಗಳ ಹಿನ್ನಡೆ
ಪಾಟ್ನಾ: ರಾಷ್ಟ್ರೀಯ ಜನತಾ ದಳ (RJD) ಭದ್ರಕೋಟೆ, ತೇಜಸ್ವಿ ಯಾದವ್ ಅವರ ರಾಘೋಪುರ್ ಕ್ಷೇತ್ರದಲ್ಲಿ ಬಿಜೆಪಿ ಹೊಸ ಅಲೆಯನ್ನೇ ಸೃಷ್ಟಿಸುತ್ತಿದೆ.
ರಾಘೋಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ 3230 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಸತೀಶ್ ಕುಮಾರ್ ಅವರು 40,180 ಮತಗಳನ್ನು ಪಡೆದಿದ್ದರೆ, ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ 36,950 ಮತ ಪಡೆದಿದ್ದಾರೆ.
ರಾಘೋಪುರ್ ಕ್ಷೇತ್ರದಲ್ಲಿ ಲಾಲು ಪ್ರಸಾದ್ ಯಾದವ್ ಎರಡು ಬಾರಿ ಗೆದಿದ್ದರು. ಅವರ ಪತ್ನಿ ರಾಬ್ರಿ ದೇವಿ ಮೂರು ಬಾರಿ ಗೆದ್ದರು. ಇಬ್ಬರೂ ಈ ಸ್ಥಾನವನ್ನು ಪ್ರತಿನಿಧಿಸುತ್ತಾ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರ ಮಗ ತೇಜಸ್ವಿ ಯಾದವ್ ಕೂಡ ಎರಡು ಬಾರಿ (2015, 2020) ಗೆದ್ದಿದ್ದಾರೆ. ಅವರು ಉಪಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದರು. ರಾಬ್ರಿ ದೇವಿ ಕೂಡ ಈ ಸ್ಥಾನದಿಂದ ಒಮ್ಮೆ ಸೋತಿದ್ದಾರೆ.