IPL 2024 | SRH vs PBKS: ನಿತೀಶ್ ಅರ್ಧಶತಕ - ಪಂಜಾಬ್‌ಗೆ 183 ರನ್‌ಗಳ ಗುರಿ ನೀಡಿದ ಹೈದರಾಬಾದ್

ಚಂಡೀಗಢ: ನಿತೀಶ್ ಕುಮಾರ್ ರೆಡ್ಡಿ ಸಮಯೋಚಿತ ಅರ್ಧಶತಕದ ಸಹಾಯದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ತಂಡಕ್ಕೆ 183 ರನ್‌ಗಳ ಗುರಿ ನೀಡಿದೆ.
ಚಂಡೀಗಢದ ಮಹಾರಾಜ ಯದವೀಂದ್ರ ಸ್ಟೇಡಿಯಂನಲ್ಲಿ ಐಪಿಎಲ್ 2024ರ ಭಾಗವಾಗಿ ನಡೆಯುತ್ತಿರುವ 23ನೇ ಪಂದ್ಯದಲ್ಲಿ ಪಂಜಾಬ್ ಟಾಸ್ ಗೆದ್ದ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ತಂಡದ ಪರ ನಿತೀಶ್ ಕುಮಾರ್ ರೆಡ್ಡಿ 64 ರನ್ (37 ಎಸೆತ, 4 ಬೌಂಡರಿ, 5 ಸಿಕ್ಸ್), ಅಬ್ದುಲ್ ಸಮದ್ 25 ರನ್ ಹಾಗೂ ಟ್ರಾವಿಸ್ ಹೆಡ್ 21 ರನ್ ಗಳಿಸಿದರು.
ಇನ್ನು ಹೈದರಾಬಾದ್ ಪರ ಅರ್ಷದೀಪ್ ಸಿಂಗ್ 4 ವಿಕೆಟ್ ಉರುಳಿಸಿ ಮಿಂಚಿದರೆ, ಸ್ಯಾಮ್ ಕರ್ರಾನ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದುಕೊಂಡರು. ಕಗಿಸೊ ರಬಾಡ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.