ಎಂಇಎಸ್ ಪುಂಡಾಟದ ವಿರುದ್ಧ ಸದನದಲ್ಲಿ ನಿರ್ಣಯ ಅಂಗೀಕಾರ

ಎಂಇಎಸ್ ಪುಂಡಾಟದ ವಿರುದ್ಧ ಸದನದಲ್ಲಿ ನಿರ್ಣಯ ಅಂಗೀಕಾರ

ಬೆಳಗಾವಿ: ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಖಂಡಿಸಿ ಸದನದಲ್ಲಿ ಖಂಡನಾ ನಿರ್ಣಯ ಅಂಗೀಕಾರವಾಗಿದೆ. ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಸ್ವಾರ್ಥ ಸಾಧನೆಗಾಗಿ ಸಮಾಜದ ಶಾಂತಿ ಹಾಳುಗೆಡವುವವರು ಈಗಲಾದರೂ ಪಾಠ ಕಲಿಯಬೇಕು ಎಂದಿದ್ದಾರೆ. ಇನ್ನು ನಿರ್ಣಯ ಮಂಡಿಸಿದ ಸಿಎಂ ಬೊಮ್ಮಾಯಿ, ರಾಯಣ್ಣ, ಬಸವಣ್ಣನವರು, ಹಾಗೂ ಶಿವಾಜಿ ಪ್ರತಿಮೆಗೆ ಹಾನಿ ಮಾಡಿದ್ದನ್ನು ಸಹಿಸಲಾಗದು‌‌. ಇಠ ಕೃತ್ಯಗಳನ್ನು ದೇಶದ್ರೋಹ ಎಂದೇ ಪರಿಗಣಿಸಿ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದರು.