ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ: ರಸ್ತೆಗಿಳಿಯುವ ಮುನ್ನ ಗಮನಿಸಿ - ಸಂಚಾರ ಮಾರ್ಗ ಬದಲಾವಣೆ

ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ: ರಸ್ತೆಗಿಳಿಯುವ ಮುನ್ನ ಗಮನಿಸಿ - ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು: ಪ್ರಧಾನಿ ಮೋದಿಯವರು ನಾಳೆ ಜನವರಿ 19ರಂದು ಬೆಂಗಳೂರು ಹೊರವಲಯ ದೇವನಹಳ್ಳಿಗೆ ಭೇಟಿ ನೀಡುತ್ತಿದ್ದು, ಅವರ ಆಗಮನ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಬೆಂಗಳೂರು ನಗರ ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ. 

ಪ್ರಧಾನಿ ಮೋದಿ ಅವರು ನಾಳೆ ಮಧ್ಯಾಹ್ನ 2:10 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ನಾಳೆ ಹೆಣ್ಣೂರು - - ಬಾಗಲೂರು ರಸ್ತೆ (ಹೊಸ ವಿಮಾನ ನಿಲ್ದಾಣ ರಸ್ತೆ) ಮತ್ತು ಕೆಐಎಗೆ ಹೋಗುವ ಇತರ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಘೋಷಿಸಿದ್ದಾರೆ. 

ಈ ವೇಳೆ ಪ್ರಧಾನಿ ಸ್ವಾಗತಕ್ಕೆ ಕಾರ್ಯಕರ್ತರಿಗೆ ಅವಕಾಶ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ದೇಶಿಸಿದ್ದು, ಪ್ರಮುಖರ ಜತೆ ಚರ್ಚೆ ಮಾಡುತ್ತಿದ್ದಾರೆ. 

19.01.2024 ರಂದು ಬೆಳಗ್ಗೆ 08:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. 

1. ಗೊಲ್ಲಹಳ್ಳಿ ಗೇಟ್- ಹುಣಚೂರು ಗ್ರಾಮ (ಕೆ.ಐ.ಎ.ಡಿ.ಬಿ ಇಂಡಸ್ಟ್ರೀಯಲ್ ಏರಿಯಾ) 
2. ಡಾಬಾ ಗೇಟ್ (ಎನ್.ಹೆಚ್.648) ನಿಂದ ಏರ್ಪೋರ್ಟ ಕಡೆಗೆ 
3. ಹೆಣ್ಣೂರು ಬಾಗಲೂರು ಮುಖ್ಯರಸ್ತೆಯಿಂದ ಏರ್ ಪೋರ್ಟ್ ಕಡೆಗೆ 
4. ಚಿಕ್ಕಜಾಲ ಕೋಟೆ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣ