ಬೆಂಗಳೂರು: ಹಿಂದಿನ ಸರಕಾರ ಮಾಡಿದ್ದ 243 ಕೌನ್ಸಿಲರ್‌ಗಳ ಆದೇಶವನ್ನು ಹಿಂಪಡೆದ ಈಗಿನ ಸರಕಾರ

ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲರ್‌ಗಳ ಸಂಖ್ಯೆಯನ್ನು 243ಕ್ಕೆ ಏರಿಸಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯನ್ನು ತಕ್ಷಣಕ್ಕೆ ಜಾರಿ ಬರುವಂತೆ ಕಾಂಗ್ರೆಸ್ ಸರಕಾರ ಹಿಂಪಡೆದಿದೆ.
ಈ ಕುರಿತಂತೆ ಆಗಸ್ಟ್ 4ರಂದು ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಬಿಬಿಎಂಪಿಯ ಅಧಿನಿಯಮ, 2020ರ 7ನೇ ಪ್ರಕರಣದ (3)ನೇ ಉಪಪ್ರಕರಣದ ಖಂಡ (ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ, ಪಾಲಿಕೆಯ ಕೌನ್ಸಿಲರ್‌ಗಳ ಸಂಖ್ಯೆಯನ್ನು 225 (ಎರಡು ನೂರ ಇಪ್ಪತ್ತೈದು) ಎಂದು ನಿಗದಿಪಡಿಸಲಾಗಿದೆ.
ಸರ್ಕಾರವು ಒಂದೊಮ್ಮೆ ಬಿಬಿಎಂಪಿ ಚುನಾವಣೆ ನಡೆಸಿದಲ್ಲಿ ನಗರಕ್ಕೆ 225 ಪಾಲಿಕೆ ಸದಸ್ಯರು ಆಯ್ಕೆಯಾಗಲಿದ್ದಾರೆ. ಈ ಸಂಖ್ಯೆ ಕಡಿತದ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು ಅಡಗಿವೆ ಹಾಗೂ ಪಾಲಿಕೆ ಚುಕ್ಕಾಣಿಯನ್ನು ಶತಾಯಗತಾಯ ಹಿಡಿಯುವ ಭಾಗದಲ್ಲಿ ಇದೊಂದು ಪ್ರಮುಖ ಹೆಜ್ಜೆ ಎಂದು ಅಂದು ಮೂಲಗಳು ತಿಳಿಸಿವೆ.