ಬೆಂಗಳೂರು : 100 ಕೈ ಶಾಸಕರ ಅಭಿಪ್ರಾಯ ಸಂಗ್ರಹ ಬೆನ್ನಲ್ಲೇ ಇಂದು ಹೈಕಮಾಂಡ್ ನಾಯಕರ ಜೊತೆ ಸಿಎಂ ಡಿಸಿಎಂ ಮಹತ್ವದ ಸಭೆ

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಇತ್ತಿಚೆಗೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ, ಸೆಪ್ಟೆಂಬರ್ ಕ್ರಾಂತಿ, ಮುಖ್ಯಮಂತ್ರಿ ಬದಲಾವಣೆ, ಐದು ವರ್ಷ ನಾನೇ ಸಿಎಂ, ಸಂಪುಟ ಪುನರಚನೆ, ಶಾಸಕರ ಮಾತು ಸಚಿವರು ಕೇಳುತ್ತಿಲ್ಲ ಹೀಗೆ ಒಂದಲ್ಲ ಒಂದು ಹೇಳಿಕೆಗಳು ಪಕ್ಷದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಇದ್ರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಖುದ್ದು ಶಾಸಕರ ಜೊತೆ ಒನ್ ಟೂ ಒನ್ ಮೀಟಿಂಗ್ ಮಾಡಿದ್ರು,ಬರೋಬ್ಬರಿ 102 ಶಾಸಕರ ಜೊತೆ ಸುರ್ಜೇವಾಲಾ ಮೀಟಿಂಗ್ ಮಾಡಿದ್ರು, ಮೀಟಿಂಗ್ ನಲ್ಲಿ ಸಚಿವರ ಮೇಲೆ ಮತ್ತು ಪಕ್ಷದ ನಾಯಕರ ಮೇಲೆ ಶಾಸಕರು ಆರೋಪಗಳ ಪಟ್ಟಿಯನ್ನೇ ಹೇಳಿ ಬಂದಿದ್ದಾರೆ. ಎಲ್ಲಾ ಸರಿಪಡಿಸುವ ಭರವಸೆ ನೀಡಿ ಶಾಸಕರ ಮನವೊಲಿಸುವ ಪ್ರಯತ್ನವನ್ನ ಸುರ್ಜೇವಾಲಾ ಮಾಡಿದ್ದಾರೆ.
ಆದ್ರೆ ನಿಜಕ್ಕೂ ಶಾಸಕರನ್ನ ಸಮಾಧಾನಿಸಲು ಸುರ್ಜೇವಾಲಾ ಬಂದಿದ್ರಾ ಅನ್ನೋ ಪ್ರಶ್ನೆ ಈಗ ಎಲ್ಲರಲ್ಲೂ ಕಾಡುತ್ತಿದೆ, ಸೆಪ್ಟೆಂಬರ್ ಕ್ರಾಂತಿಗೂ ಇದಕ್ಕೂ ಏನಾದ್ರು ಲಿಂಕ್ ಇದ್ಯಾ? ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಏನಾದ್ರು ಬಂದಿದ್ರಾ ಸುರ್ಜೇವಾಲಾ ? ಎಂದೂ ಇಲ್ಲದದ್ದು ಈ ಬಾರಿ ಹೀಗೆ ಏಕಾಏಕಿ ಬಂದು ಶಾಸಕರ ಜೊತೆ ಒನ್ ಟು ಒನ್ ಮೀಟಿಂಗ್ ಮಾಡಿದ್ದು ಯಾಕೆ ? ಮುಖ್ಯಮಂತ್ರಿ ಬದಲಾವಣೆ ಅಧಿಕಾರ ಹಸ್ತಾಂತರದ ಚರ್ಚೆ ಬೆನ್ನಲ್ಲೇ ಹೀಗೆ ಶಾಸಕರ ಜೊತೆ ಒನ್ ಟೂ ಒನ್ ಮೀಟಿಂಗ್ ಮಾಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಇದೆಲ್ಲದರ ನಡುವೆ ಇಂದು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಸಿಎಂ ಡಿಸಿಎಂ ಚರ್ಚೆ ಸಹ ನಡೆಯಲಿದೆ.
ಶಾಸಕರ ಅಭಿಪ್ರಾಯ ಸಂಗ್ರಹಿಸಿರುವ ವರದಿಯನ್ನ ಸುರ್ಜೇವಾಲಾ ಸಭೆಯಲ್ಲಿ ಮಂಡಿಸಲಿದ್ದಾರೆ. ಎಲ್ಲಾ ಗೊಂದಲಗಳಿಗೂ ಇಂದು ನಡುವೆ ಸಭೆ ಬ್ರೇಕ್ ಬಿಳುವ ಸಾಧ್ಯತೆ ಇರಲಿದೆ ಎನ್ನಲಾಗಿದೆ. ಇದ್ರ ಜೊತೆಗೆ ಖಾಲಿ ಇರುವ ವಿಧಾನಪರಿಷತ್ ಸದಸ್ಯರ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಹಾಗೂ ಸಂಪುಟ ವಿಸ್ತರಣೆ ಇದೆಲ್ಲದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಒಟ್ಟಾರೆ ಇಂದು ದೆಹಲಿಯಲ್ಲಿ ನಡೆಯಲಿರುವ ಸಭೆ ಸಾಕಷ್ಟು ಕೂತಹಲ ಮೂಡಿಸಿದೆ.