CT 2025 | Semifinals: ಆಸೀಸ್ ವಿರುದ್ಧ ಸೇಡು ತೀರಿಸಿಕೊಂಡ ಭಾರತ - ಫೈನಲ್‌ಗೆ ಟೀಂ ಇಂಡಿಯಾ ಎಂಟ್ರಿ!

CT 2025 | Semifinals: ಆಸೀಸ್ ವಿರುದ್ಧ ಸೇಡು ತೀರಿಸಿಕೊಂಡ ಭಾರತ - ಫೈನಲ್‌ಗೆ ಟೀಂ ಇಂಡಿಯಾ ಎಂಟ್ರಿ!

ದುಬೈ: ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್ ರಾಹುಲ್ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ‌ ಭಾರತವು ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್ ಗಳಿಂದ ಗೆದ್ದು ಚಾಂಪಿಯನ್ಸ್ ಟ್ರೋಫಿ ಹೋರಾಟದಲ್ಲಿ ಫೈನಲ್‌ ಗೆ ಎಂಟ್ರಿ ಕೊಟ್ಟಿದೆ. 

ಚಾಂಪಿಯನ್ಸ್ ಟ್ರೋಫಿ 2025ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ್ ಆಸ್ಟ್ರೇಲಿಯಾ ತಂಡವು 49.3 ಓವರ್‌ಗಳಲ್ಲಿ 264 ರನ್ ಗಳಿಸಿ ಆಲೌಟ್ ಗೆ‌ ತುತ್ತಾಗಿತ್ತು. 265 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡವು 48.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ದಾಖಲಿಸಿ ಗೆಲುವಿನ ನಗೆ ಬೀರಿತು. 

ಭಾರತದ ಪರ ವಿರಾಟ್ ಕೊಹ್ಲಿ 84 ರನ್, ಶ್ರೇಯಸ್ ಅಯ್ಯರ್ 45 ರನ್, ಕೆ.ಎಲ್ ರಾಹುಲ್ ಅಜೇಯ 42 ರನ್ ಗಳಿಸಿ ತಂಡದ ಗೆಲುವಿಗೆ‌ ಪ್ರಮುಖ ಕೊಡುಗೆ ನೀಡಿದರು. 

ಇದಕ್ಕೂ ಮುನ್ನ ಆಸೀಸ್ ಪರ ಸ್ಟೀವ್ ಸ್ಮಿತ್ 73 ರನ್, ಅಲೆಕ್ಸ್ ಕ್ಯಾರಿ 61 ರನ್‌ ಗಳಿಸಿದ್ದರು. ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತು‌ ಮಿಂಚಿದರೆ, ರವೀಂದ್ರ ಜಡೇಜಾ ಹಾಗೂ ವರುಣ್ ಚಕ್ರವರ್ತಿ ತಲಾ 2 ವಿಕೆಟ್, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಉರುಳಿಸಿದ್ದರು.