ಬೆಂಗಳೂರು: "ಇನ್ನು ಮುಂದೆ ಹಾಫ್ ಹೆಲ್ಮೆಟ್ ಧರಿಸಿದ್ರೂ ಬೀಳುತ್ತೆ‌ ಫುಲ್ ಫೈನ್"

ಬೆಂಗಳೂರು:

ಬೆಂಗಳೂರು: ನಗರದಲ್ಲಿ ಹಲವು ಕಡೆ ಸಂಚಾರಿ ಪೊಲೀಸ್ರು ಇದೀಗ ಒಂದು ಜಾಗೃತಿ ಅಭಿಯಾನ ಮಾಡ್ತಿದ್ದಾರೆ. ಅದೇ ಹಾಫ್ ಹೆಲ್ಮೆಟ್ ವಿಚಾರವಾಗಿ. ‌ಪೊಲೀಸರು ಫೈನ್ ಹಾಕ್ತಾರೆ ಅನ್ನೋ ಕಾರಣಕ್ಕೆ ಸಾಕಷ್ಟು ಸವಾರರು ಬೇಕಾಬಿಟ್ಟಿಯಾಗಿ ಕಳಪೆ ಹೆಲ್ಮೆಟ್ ನ್ನೇ ಧರಿಸ್ತಿದ್ದಾರೆ! ಕ್ಯಾಪ್ ಹೆಲ್ಮೆಟ್, ಹಾಫ್ ಹೆಲ್ಮೆಟ್ ಧರಿಸಿ ರಸ್ತೆಗೆ ಬರ್ತಿದ್ದಾರೆ.‌ ಸರ್ವೇ ಪ್ರಕಾರ ಅಪಘಾತದಲ್ಲಿ ಈ ಹಾಫ್ ಹೆಲ್ಮೆಟ್ ಧರಿಸಿದ್ದವರೇ ಹೆಚ್ಚು ಸಾಯ್ತಿದ್ದಾರೆ.‌ ಇದೇ ಕಾರಣಕ್ಕೆ ನಗರ ಸಂಚಾರಿ ಪೊಲೀಸ್ ಆಯುಕ್ತರು ಈ ಹಾಫ್ ಹೆಲ್ಮೆಟ್ ಬ್ಯಾನ್ ಗೆ ತೀರ್ಮಾನ ಮಾಡಿದ್ದಾರೆ. ‌ಫೇಸ್ ಕವರ್ ಹೆಲ್ಮೆಟ್ ಧರಿಸುವಂತೆ ಮೊದಲು ಜಾಗೃತಿ ಮೂಡಿಸಿ, ನಂತರ ಇದಕ್ಕೆ ಫೈನ್ ಹಾಕೋ ತೀರ್ಮಾನಕ್ಕೆ ಬಂದಿದ್ದಾರೆ.‌ ಇನ್ನು, ಸಾಕಷ್ಟು ಪೊಲೀಸರೂ ಹಾಫ್ ಹೆಲ್ಮೆಟ್ ಧರಿಸ್ತಿದ್ದು, ಅವರಿಗೂ ಈ ಫುಲ್ ಹೆಲ್ಮೆಟ್ ಪಾಲಿಸಿಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸೂಚಿಸಲಾಗಿದೆ.