ಬೆಂಗಳೂರು: ಏರ್ ಪೋರ್ಟ್ ನಲ್ಲಿ ಕೋವಿಡ್ ಟೆಸ್ಟ್ ದುಬಾರಿ - ಸ್ಪಷ್ಟನೆ ಕೊಟ್ಟ ಸಿಎಂ

ಬೆಂಗಳೂರು: ಏರ್ ಪೋರ್ಟ್ ನಲ್ಲಿ ಕೋವಿಡ್ ಟೆಸ್ಟ್ ಗೆ ದುಬಾರಿ ಹಣ ಪಡೆಯುತ್ತಿರುವ ವಿಚಾರವಾಗಿ ಸಿಎಂ ಬೊಮ್ಮಾಯಿ ಸ್ಪಷ್ಟನೆ ಕೊಟ್ಟಿದ್ದಾರೆ. ಟೆಕ್ನಾಲಜಿ ಹಾಗಿದೆ ಕಿಟ್ ಟೆಸ್ಟ್ ಗೆ ವಿಶೇಷ ಸಲಕರಣೆಗಳ ಬಳಕೆ ಮಾಡ್ತಾರೆ 500 ರೂ ಗೆ ಟೆಸ್ಟ್ ಆಗುತ್ತೆ,ತಂತ್ರಜ್ಞಾನ ಆಧಾರಿತ ಟೆಸ್ಟ್ ಮಾಡ್ತಾರೆ ಹಾಗಾಗಿ ದರ ಸ್ವಲ್ಪ ಹೆಚ್ಚೇ, ನಮ್ಮಲ್ಲೇ ದರ ಕಡಿಮೆ ಇರುವುದು ತಮಿಳುನಾಡಿನಲ್ಲಿ ನಮಗಿಂತಲೂ ಜಾಸ್ತಿ ಇದೆ ಎಂದು ಟೆಸ್ಟ್ ಗೆ ದುಬಾರಿ ಹಣದ ಬಗ್ಗೆ ಸಿಎಂ ಸಮರ್ಥಿಸಿಕೊಂಡಿದ್ದಾರೆ. ಮತಾಂತರ ನಿಷೇಧ ಮಸೂದೆ ಮಂಡನೆಗೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಮಾತಾನಾಡಿದ ಬೊಮ್ಮಾಯಿ ಕಾಂಗ್ರೆಸ್ ಒಂದು ವಿರೋಧ ಪಕ್ಷ ಹಾಗಾಗಿ ಎಲ್ಲಕ್ಕೂ ವಿರೋಧ ಮಾಡ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.