ರಾಜ್ಯ ಬಿಜೆಪಿಯ ಭಿನ್ನಮತ ಬೆನ್ನಲ್ಲೇ ಪಿಎಂ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಬಿ ವೈ ವಿಜಯೇಂದ್ರ

ರಾಜ್ಯ ಬಿಜೆಪಿಯ ಭಿನ್ನಮತ ಬೆನ್ನಲ್ಲೇ ಪಿಎಂ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಬಿ ವೈ ವಿಜಯೇಂದ್ರ

ನವದೆಹಲಿ : ರಾಜ್ಯ ಬಿಜೆಪಿಯಲ್ಲಿ ಮುಗಿಯದ ಕಥೆಯಾಗಿದೆ. ಇದೀಗ ಬಣಗಳ ಗುದ್ದಾಟದ ನಡುವೆ ದಿಢೀರಾಗಿ ಪ್ರಧಾನಿ ಮೋದಿಯವರನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನವದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ ಈ ನಡುವೆಯೇ ವಿಜಯೇಂದ್ರ ನವದೆಹಲಿಗೆ ತೆರಳಿ ಅದ್ರಲ್ಲೂ ದೆಹಲಿಯಲ್ಲೂ ಸಂಸತ್ತ ಅಧಿವೇಶನ ನಡುವೆಯೇ ಪ್ರಧಾನಿ ಮೋದಿಯನ್ನ ಭೇಟಿಯಾಗಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

ಯತ್ನಾಳ್ - ವಿಜಯೇಂದ್ರ ಬಣಗಳ ಸಂಘರ್ಷ ತಾರಕ್ಕಕ್ಕೆ ಏರಿದೆ ಇನ್ನೂ ಸಹ ವಿಜಯೇಂದ್ರ ವಿರುದ್ಧವಾಗಿ ಯತ್ನಾಳ್ ಬಹಿರಂಗ ಹೇಳಿಕೆಗಳನ್ನ ನೀಡುತ್ತಿದ್ದಾರೆ ಇದ್ರ ನಡುವೆ ಎರಡು ಬಣಗಳು ಪ್ರತ್ಯೇಕವಾಗಿ ಸಮಾವೇಶದಲ್ಲಿ ಮಾಡಬೇಕು ಎಂಬ ಸುದ್ದಿಯೂ ಹರಿದಾಡುತ್ತಿದೆ ಇದ್ರ ಬೆನ್ನಲ್ಲೇ ವಿಜಯೇಂದ್ರ ಪ್ರಧಾನಿ ಮೋದಿಯನ್ನ ಭೇಟಿಯಾಗಿ ಚರ್ಚೆ ನಡೆಸಿರೋದು ಬಿಜೆಪಿ ನಾಯಕರಲ್ಲಿ ಕುತೂಹಲ ಮೂಡಿಸಿದೆ.