Breaking News: ಚೆಸ್ ಒಲಿಂಪಿಯಾಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ ಭಾರತ

ನವದೆಹಲಿ: ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಇತಿಹಾಸದಲ್ಲೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದೆ.
ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಅರ್ಜುನ್ ಎರಿಗೈಸಿ, ಗುಕೇಶ್ ಡಿ, ಆರ್ ಪ್ರಗ್ನಾನಂದ, ವಿದಿತ್ ಗುಜರಾತಿ, ಪಿ ಹರಿಕೃಷ್ಣ ಮತ್ತು ಶ್ರೀನಾಥ್ ನಾರಾಯಣನ್ (ನಾಯಕ) ಅವರನ್ನು ಒಳಗೊಂಡ ಭಾರತೀಯ ಪುರುಷರ ತಂಡವು ಓಪನ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿತು. 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಓಪನ್ ವಿಭಾಗದಲ್ಲಿ ಕಂಚು ಗೆದ್ದಿತ್ತು.