BREAKING: ಸಂಸತ್ ಕಲಾಪದ ವೇಳೆ 46 ಮಂದಿ ಸಂಸದರು ಅಮಾನತು

BREAKING: ಸಂಸತ್ ಕಲಾಪದ ವೇಳೆ 46 ಮಂದಿ ಸಂಸದರು ಅಮಾನತು

ನವದೆಹಲಿ: ಸಂಸತ್‌ ಕಾರ್ಯ ಕಲಾಪದ ವೇಳೆ ಆಶಿಸ್ತು ತೋರಿದ ಆರೋಪದ ಮೇರೆಗೆ ಒಟ್ಟು 46 ಮಂದಿಯನ್ನು ಅಮಾನತು ಮಾಡಲಾಗಿದೆ. ಇತ್ತೀಚೆಗೆ ನಡೆದ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತಾಡಬೇಕು ಎಂದು ಲೋಕಸಭಾ ಸಂಸದರು ಆಗ್ರಹಿಸಿದ್ದರು. ಈ ವೇಳೆ ಗದ್ದಲ ಎಬ್ಬಿಸಿದ್ದು, ಇದರ ಆರೋಪದ ಮೇಲೆ ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ.

ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ಕಲ್ಯಾಣ್ ಬ್ಯಾನರ್ಜಿ, ಕಾಕೋಲಿ ಘೋಷ್ ದಸ್ತಿದಾರ್, ಸೌಗತ ರೇ, ಸತಾಬ್ದಿ ರಾಯ್, ಎ ರಾಜಾ ಮತ್ತು ದಯಾನಿಧಿ ಮಾರನ್ ಸೇರಿದಂತೆ ಹಲವು ವಿರೋಧ ಪಕ್ಷದ ಸಂಸದರನ್ನು ಅಮಾನತು ಮಾಡಲಾಗಿದೆ. ಹೀಗಾಗಿ ಬಿಜೆಪಿ ಸರ್ಕಾರ ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದು, ವಿಪಕ್ಷಗಳ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಸಸ್ಪೆಂಡ್ ಆದ ಸಂಸದರು ಕಿಡಿಕಾರಿದ್ದಾರೆ.

ದೇಶದ ಗಂಭೀರ ವಿಚಾರಗಳ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರ ಹೆದರುತ್ತಿದೆ. ಸುದೀರ್ಘ ಚರ್ಚೆ ಮಾಡಿ ಎಂದಿದ್ದಕ್ಕೆ ಅಮಾನತು ಮಾಡಲಾಗಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಆಕ್ರೋಶ ಹೊರಹಾಕಿದ್ದಾರೆ.