ಬ್ರೇಕಿಂಗ್: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯ ಫಲಿತಾಂಶಕ್ಕೆ ಕೋರ್ಟ್‌ನಿಂದ ತಡೆ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯಕಾರಿಣಿ ಸಮಿತಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಫಲಿತಾಂಶ ಘೋಷಣೆ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಿಂದ ತಡೆ ಆಜ್ಞೆ ಬಂದಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯು ನ್ಯಾಯಾಲಯದ ಮೆಟ್ಟಿಲೇರಿದೆ. 'ಜಿ.ಪಿ.ಕುಮಾರ್ ಪ್ರದರ್ಶಕರಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ ಪ್ರದರ್ಶಕ ಸದಸ್ಯತ್ವ ಪಡೆದು ಮಂಡಳಿಯ ಕಲ್ಯಾಣ ನಿಧಿ, ಮತ್ತಿತರೆ ದುರುಪಯೋಗ ಪಡೆಸಿಕೊಂಡಿದ್ದಾರೆ' ಎಂದು ರ೦ಗಪ್ಪ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ರ೦ಗಪ್ಪ ಅವರ ಮಧ್ಯ೦ತರ ಅರ್ಜಿಯನ್ನು ಪುರಸ್ಕರಿಸಿ ಚುನಾವಣಾಧಿಕಾರಿಗೆ ಪ್ರದರ್ಶಕ ವಲಯದ ಉಪಾಧ್ಯಕ್ಷ ಸ್ಥಾನದ ಫಲಿತಾ೦ಶ ಪ್ರಕಟಿಸದಂತೆ ಆದೇಶಿಸಿದೆ.
ಬ್ರೇಕಿಂಗ್: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯ ಫಲಿತಾಂಶಕ್ಕೆ ಕೋರ್ಟ್‌ನಿಂದ ತಡೆ