ಇವಿ ಬ್ಯಾಟರಿ, ಚಾರ್ಜರ್ ಪರೀಕ್ಷಾ ಸೌಲಭ್ಯಕ್ಕೆ ಕೇಂದ್ರ ಸಚಿವ ಜೋಶಿ ಶಂಕುಸ್ಥಾಪನೆ

ಇವಿ ಬ್ಯಾಟರಿ, ಚಾರ್ಜರ್ ಪರೀಕ್ಷಾ ಸೌಲಭ್ಯಕ್ಕೆ ಕೇಂದ್ರ ಸಚಿವ ಜೋಶಿ ಶಂಕುಸ್ಥಾಪನೆ

ಬೆಂಗಳೂರು: ಎಲೆಕ್ಟ್ರಿಕ್ ವಾಹನ ಬ್ಯಾಟರಿ ಹಾಗೂ ಚಾರ್ಜರ್‌ಗಳ ಪರೀಕ್ಷಾ ಸೌಲಭ್ಯ ಕೇಂದ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 

ಬೆಂಗಳೂರಿನ ಜಕ್ಕೂರಿನಲ್ಲಿ ಈ ಸೌಲಭ್ಯ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಶಂಕುಸ್ಥಾಪನೆ ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಉದ್ಯಮ ವೇಗವಾಗಿ ಬೆಳೆಯುತ್ತಿದೆ‌. ಈ ಪರೀಕ್ಷಾ ಸೌಲಭ್ಯ ಕೇಂದ್ರ ಆರಂಭಿಸಿರುವುದರಿಂದ ಇ.ವಿ ಉದ್ಯಮಕ್ಕೆ ಹೊಸ ಹುರುಪು ಸಿಕ್ಕಂತಾಗುತ್ತದೆ. ಬೆಂಗಳೂರು ಸೇರಿ ಮುಂದೆ ಮುಂಬೈ, ಕೋಲ್ಕತ್ತಾ ನಗರಗಳಲ್ಲಿ ಇದೇ ರೀತಿಯ ಸೌಲಭ್ಯಗಳನ್ನು ಸ್ಥಾಪಿಸಲು ನ್ಯಾಷನಲ್ ಟೆಸ್ಟಿಂಗ್ ಹೌಸ್ ಸಜ್ಜಾಗಿದೆ‌ ಎಂದರು. 

ಈ ಸೌಲಭ್ಯ ಕೇಂದ್ರವು, ಇ.ವಿ ವಾಹನ ಹಾಗೂ ಬ್ಯಾಟರಿ ಚಾರ್ಜರ್‌ಗಳಿಗೆ ಗುಣಮಟ್ಟ ಹಾಗೂ ಸುರಕ್ಷತೆ ಖಾತ್ರಿಪಡಿಸುತ್ತದೆ. ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆಗಳಿಗೆ ಈ ಸೌಲಭ್ಯ ಕೇಂದ್ರವು ಅಮೂಲ್ಯ ಬೆಂಬಲ ನೀಡುತ್ತದೆ ಎಂದು ಜೋಶಿ ಹೇಳಿದ್ದಾರೆ.