ಕರ್ನಾಟಕದಲ್ಲಿ ಮಾಸ್ಕ್ ಗೆ ಗುಡ್ ಬೈ ಹೇಳೋದು ಯಾವಾಗ ?

ಬೆಂಗಳೂರು: ಕೋವಿಡ್ ನಿಯಮಗಳು ನಿಧಾನಕ್ಕೆ ಬಹುತೇಕ ರಾಜ್ಯಗಳಲ್ಲಿ ಸಡಿಲಗೊಳ್ಳುತ್ತಿವೆ. ಕರ್ನಾಟಕದಲ್ಲೂ ಅದು ಸಡಿಲಗೊಂಡಿದಿಯೇ ಅನ್ನೋ ಪ್ರಶ್ನೆ ಕೂಡ ಇದೆ. ಅದಕ್ಕೆ ಈಗ ಆರೋಗ್ಯ ಸಚಿವ ಸುಧಾಕರ್ ಉತ್ತರ ಕೊಟ್ಟಿದ್ದಾರೆ. ಮಾಸ್ಕ್ ಅನ್ನ ಜನರು ಕಡ್ಡಯಾವಾಗಿ ಧರಿಸಲೇಬೇಕು ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಸುಧಾಕರ್ ಈಗ ಮಾತನಾಡಿದ್ದಾರೆ. ಈ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ತಾಂತ್ರಿಕ ಸಲಹಾ ಸಮೀತಿ ಜೊತೆಗೆ ಸಭೆ ನಡೆಸುತ್ತೇವೆ. ಅಲ್ಲಿ ಚರ್ಚಿಯ ಬಳಿಕವೇ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತಲೇ ಸುಧಾಕರ್ ಹೇಳಿದ್ದಾರೆ.