ಟ್ವಿಟರ್ ಮಂಡಳಿ ಸೇರದಿರಲು ಎಲೋನ್ ಮಸ್ಕ್ ನಿರ್ಧಾರ

ನವದೆಹಲಿ: ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟರ್ ಮಂಡಳಿಗೆ ಸೇರುವುದಿಲ್ಲ ಎಂದು ಟ್ವಿಟರ್ ಸಿ.ಇ.ಓ ಪರಾಗ್ ಅಗರ್ವಾಲ್ ಹೇಳಿದ್ದಾರೆ. ಎಲೋನ್ ಮಸ್ಕ್ ನಮ್ಮ ಟ್ವಿಟರ್ ಮಂಡಳಿಗೆ ಸೇರದೇ ಇರಲು ನಿರ್ಧರಿಸಿದ್ದಾರೆ. ಆದರೂ ಸಹ ಟ್ವಿಟರ್ ಅವರ ಇನ್‌ಪುಟ್ಸ್‌ಗಾಗಿ ಸದಾ ಓಪನ್ ಆಗಿರುತ್ತದೆ ಎಂದು ಅಗರ್ವಾಲ್ ತಿಳಿಸಿದ್ದಾರೆ. ಎಲೋನ್ ಮಸ್ಕ್ ಕೆಲವು ದಿನಗಳ ಹಿಂದೆ ಟ್ವಿಟರ್ ನಲ್ಲಿದ್ದ ಶೇಕಡ 9.2 ರಷ್ಟು ಪಾಲನ್ನ ಘೋಷಿಸಿದ್ದರು.ಆದರೆ, ಈಗ ಟ್ವಿಟರ್ ಮಂಡಳಿ ಸೇರದಿರಲು ನಿರ್ಧರಿಸಿದ್ದಾರೆ.