ಉಕ್ರೇನ್ ವಾಯುಪ್ರದೇಶ ಬಂದ್: ಭಾರತೀಯರನ್ನು ಕರೆತರಲು ಹೋಗಿದ್ದ ವಿಮಾನ ದೆಹಲಿಗೆ ವಾಪಸ್

ಉಕ್ರೇನ್ ವಾಯುಪ್ರದೇಶ ಬಂದ್: ಭಾರತೀಯರನ್ನು ಕರೆತರಲು ಹೋಗಿದ್ದ ವಿಮಾನ ದೆಹಲಿಗೆ ವಾಪಸ್

ನವದೆಹಲಿ: ರಷ್ಯಾದ ದಾಳಿಯ ಹಿನ್ನೆಲೆಯಲ್ಲಿ ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಇದರಿಂದಾಗಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಉಕ್ರೇನ್‌ಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನವು ದೆಹಲಿಗೆ ಮರಳಿದೆ. ತನ್ನ ಪೂರ್ವ ಭಾಗಗಳಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ನಡೆಸುತ್ತಿರುವ ಕಾರಣ ತನ್ನ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು ಉಕ್ರೇನ್ ಹೇಳಿದ ನಂತರ ಏರ್ ಇಂಡಿಯಾ ದೆಹಲಿಗೆ ಹಿಂತಿರುಗುತ್ತಿದೆ. ರಷ್ಯಾದೊಂದಿಗಿನ ಸಂಘರ್ಷದ ನಡುವೆ ಸಾವಿರಾರು ಭಾರತೀಯರು ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಲು ಕಾಯುತ್ತಿದ್ದಾರೆ.