ರಾಜ್ಯದಲ್ಲಿ ಮಳೆಗಾಲ ಶುರುವಾದ ಬೆನ್ನಲ್ಲೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚು

ರಾಜ್ಯದಲ್ಲಿ ಮಳೆಗಾಲ ಶುರುವಾದ ಬೆನ್ನಲ್ಲೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚು

ಬೆಂಗಳೂರು: ರಾಜ್ಯಾದ್ಯಂತ 24 ದಿನಗಳಲ್ಲಿ 1813 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಜುಲೈ 1ರಿಂದ ಈವರೆಗೆ 1813 ಮಂದಿಗೆ ಡೆಂಗ್ಯೂ ಸೋಂಕು ಪತ್ತೆಯಾಗಿದ್ದು, ಬೆಂಗಳೂರು ಒಂದರಲ್ಲೇ 1330 ಪ್ರಕರಣಗಳು ವರದಿ, ಉಳಿದ 30 ಜಿಲ್ಲೆಗಳಲ್ಲಿ 483 ಕೇಸ್‌ಗಳು ದಾಖಲಾಗಿದೆ. 

ಜನವರಿಯಿಂದ ಈವರೆಗೆ ಬೆಂಗಳೂರಿನಲ್ಲಿ 2062, ಮೈಸೂರಿನಲ್ಲಿ 280, ವಿಜಯಪುರದಲ್ಲಿ 134, ಶಿವಮೊಗ್ಗದಲ್ಲಿ 120, ಬೆಳಗಾವಿ-112, ಚಿತ್ರದುರ್ಗ-104, ಧಾರವಾಡದಲ್ಲಿ 99 ಸೇರಿ ಒಟ್ಟು 4,108 ಪ್ರಕರಣಗಳು ವರದಿ ಎಂದು ಆರೋಗ್ಯ ಇಲಾಖೆಯ ಮಾಹಿತಿ ನೀಡಿದೆ.