ಇಂದು ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆ 'ಗೃಹ ಜ್ಯೋತಿ' ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ಇಂದಿನಿಂದ ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆ 'ಗೃಹ ಜ್ಯೋತಿ' ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ ಕೆಲ ವೆಬ್ ಸೈಟ್‌ಗಳಲ್ಲಿ ಇನ್ನೂ ವಿಳಂಬವಾಗಿದ್ದು, ಬೆಸ್ಕಾಂ, ಜೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂನಲ್ಲಿ 3ಗಂಟೆಯ ನಂತರ ಜಾರಿಯಾಗಲಿದೆ.
ಏಕಕಾಲದಲ್ಲಿ ರಾಜ್ಯಾದ್ಯಂತ ಜಾರಿಯಾಗಬೇಕಿದ್ದ ಗೃಹ ಜ್ಯೋತಿ ಇಂದು ಬೆಳ್ಳಿಗ್ಗೆಯಿಂದ ಬೆಂಗಳೂರು 1ನಲ್ಲಿ ಓಪನ್ ಆರಂಭವಾಗಲಿದೆ. ಮಧ್ಯಾಹ್ನದ 3 ಗಂಟೆ ನಂತರ ನಾಡಕಚೇರಿ, ಗ್ರಾಮ ಪಂಚಾಯ್ತಿ, ವಿದ್ಯುತ್ ಕಚೇರಿಯಲ್ಲಿ ಓಪನ್ ಆಗುವ ಸಾಧ್ಯತೆ ಇದೆ. ಏನಾದರೂ ಸರ್ವರ್ ಸಮಸ್ಯೆ ಕಂಡು ಬಂದರೆ ಮಧ್ಯಾಹ್ನ ಮೂರು ಗಂಟೆ ನಂತರ ಅರ್ಜಿ ಸಲ್ಲಿಸಬಹುದು. ಬಾಡಿಗೆ ಮನೆಯಲ್ಲಿ ಇರುವವರಿಗೂ ಹಾಗೂ ಸ್ವಂತ ಮನೆಯಲ್ಲಿ ಇರುವವರಿಗೂ ಸರಳಿ ಕರಣವನ್ನು ಇಂಧನ ಇಲಾಖೆ ಮಾಡಿದೆ.
ಆಧಾರ್ ನಂಬರ್‌ಗೆ ಮೊಬೈಲ್ ನಂಬರ್ ಲಿಂಕ್ ಇರಲೇಬೇಕು. ವಿದ್ಯುತ್ ಬಿಲ್ ಹಾಗೂ ಆಧಾರ ಲಿಂಕ್ ಇರುವ ಮೊಬೈಲ್ ಕಡ್ಡಾಯ. ಈ ಮೂರು ಇದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಕರಾರು ಪತ್ರ ಅವಶ್ಯಕತೆ ಇಲ್ಲ. ಬೆಸ್ಕಾಂ ಸ್ಥಳೀಯ ಆಫೀಸ್ ಹಾಗೂ ಬೆಂಗಳೂರು ಒನ್, ಕರ್ನಾಟಕ ಒನ್ ನಾಡ ಕಛೇರಿ ಹಾಗೂ ಮೊಬೈಲ್ ಮೂಲಕವು ಅರ್ಜಿ ಸಲ್ಲಿಸಬಹುದು. ಮಧ್ಯಾಹ್ನ ಮೂರು ಗಂಟೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಪ್ರಯತ್ನ ಮಾಡಬಹುದು ಎಂದು ಇಂಧನ ಇಲಾಖೆ ತಿಳಿಸಿದೆ.