ಬೆಂಗಳೂರು : ಗಡಿಯಲ್ಲಿ ಉದ್ವಿಗ್ನತೆ - ರಾಜ್ಯ ಗುಪ್ತಚರ ಇಲಾಖೆಯಿಂದ ಕಟ್ಟೆಚ್ಚರ ಸುತ್ತೋಲೆ ಬಿಡುಗಡೆ

ಬೆಂಗಳೂರು : ಗಡಿಭಾಗದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ರಾಜ್ಯ ಗುಪ್ತಚರ ಇಲಾಖೆ ಮಹತ್ವದ ಸುತ್ತೋಲೆ ಬಿಡುಗಡೆ ಮಾಡಿದೆ. ಪ್ರಮುಖ ಸ್ಥಳಗಳು, ಸಾರ್ವಜನಿಕ ಜಮಾವಣೆ ಪ್ರದೇಶಗಳು ಮತ್ತು ಪ್ರಮುಖ ಆಧಾರ ಸೌಕರ್ಯಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಎಲ್ಲಾ ಜಿಲ್ಲೆಗಳಿಗೆ ಸೂಚನೆ ನೀಡಲಾಗಿದೆ. ಭದ್ರತಾ ವ್ಯವಸ್ಥೆ ಕಟ್ಟು ನಿಟ್ಟಾಗಿ ಪಾಲಿಸಲು ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸೂಚನೆ ನೀಡಲಾಗಿದೆ. ಇಲ್ಲಿದೆ ಮಾಹಿತಿ..
1) ಆಡಳಿತ ಕಟ್ಟಡಗಳು..
2) ರಕ್ಷಣಾ ಸ್ಥಾವರಗಳು..
3) ವಿಜ್ಞಾನ ಸಂಶೋಧನಾ ಕೇಂದ್ರಗಳು..
4) ಏರ್ ಪೋರ್ಟ್ ಗಳು..
5) ಡ್ಯಾಮ್ ಗಳು..
6) ಉಪಗ್ರಹ ಕೇಂದ್ರಗಳು..
7) ಜಲವಿದ್ಯುತ್ ಸ್ಥಾವರಗಳು.. ಥರ್ಮಲ್ ಸ್ಥಾವರಗಳು..
8) ಸಾಫ್ಟ್ ವೇರ್ ಕಂಪನಿಗಳು..
9) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನೀಲ ಕೇಂದ್ರಗಳು..
10) ಪೈಪ್ ಲೈನ್ ಕೇಂದ್ರಗಳು..
11) ಜನಸಂದಣಿ ಸೇರುವ ಶಾಪಿಂಗ್ ಮಾಲ್ ಗಳು ಮತ್ತು ಸ್ಟಾರ್ ಹೋಟೆಲ್ ಗಳು..
12) ವಿದೇಶಿ ರಾಜತಾಂತ್ರಿಕ ಕಚೇರಿಗಳು ವಸತಿ ಮತ್ತಿತರ ಕಟ್ಟಡಗಳು..
13) ಭಾರೀ ಕೈಗಾರಿಕಿಗಳು..
14) ಜನ ಸಂದಣಿ ಸೇರುವ ದೇವಾಲಯಲಗಳು ಮಸೀದಿ (ವಿಶೇಷವಾಗಿ ಶುಕ್ರವಾರದಂದು) ಚರ್ಚ್ ಗಳು..
15) ಮತ್ತಿತರೆ ಜನಸಂದಣಿ ಸೇರುವ ಸ್ಥಳಗಳು..