ಮಂಗಳೂರು: ಜುಲೈ 24ರಂದು ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ

ಮಂಗಳೂರು: ಜುಲೈ 24ರಂದು ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ

ಮಂಗಳೂರು: ಲೋಲಿಲೆಮ್ ಅಸ್ನೋಟಿ ಭಾಗದಲ್ಲಿ ವಿದ್ಯುತ್ ಮಾರ್ಗದ ನಿರ್ವಹಣೆ ಕಾರ್ಯದ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. 

ಜುಲೈ 24ರಂದು ಮಂಗಳೂರು ಸೆಂಟ್ರಲಿನಿಂದ ಹೊರಡುವ ಮಂಗಳೂರು ಸೆಂಟ್ರಲ್-ಮಡಗಾಂವ್ * ಜಂಕ್ಷನ್ ಪ್ಯಾಸೆಂಜ‌ರ್ (56616) ರೈಲು ದಾರಿ ಮಧ್ಯೆ 1.30 ಗಂಟೆ ಕಾಲ ನಿಯಂತ್ರಣಕ್ಕೊಳಪಡಲಿದೆ. 

ಜು. 23ರಂದು ಉದ್ನಾ ಜಂಕ್ಷನ್‌ನಿಂದ ಹೊರಡುವ ಉದ್ನಾ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ದಾರಿ ಮಧ್ಯೆ 30 ನಿಮಿಷ ಕಾಲ ತಡೆಹಿಡಿಯಲ್ಪಡುವುದು. ಜುಲೈ 24ರಂದು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2.10ಕ್ಕೆ ಹೊರಡುವ ಮಂಗಳೂರು ಜಂಕ್ಷನ್-ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಸಮಯದಲ್ಲಿ ಬದಲಾವಣೆ ಮಾಡಲಾಗುವುದು. ಇದು ಅದೇ ದಿನ 1 ಗಂಟೆ ತಡವಾಗಿ ಅಂದರೆ 3.10ಕ್ಕೆ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.