ಟ್ರಾಫಿಕ್ ಮುಕ್ತ ಬೆಂಗಳೂರಿನತ್ತ BBMP ನಡೆ, ಫ್ರೀಡಂ ಪಾರ್ಕ್‌ನಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ಲೋಕಾರ್ಪಣೆ

ಟ್ರಾಫಿಕ್ ಮುಕ್ತ ಬೆಂಗಳೂರಿನತ್ತ BBMP ನಡೆ, ಫ್ರೀಡಂ ಪಾರ್ಕ್‌ನಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ಲೋಕಾರ್ಪಣೆ

ಗಾಂಧಿನಗರ : ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ಟ್ರಾಫಿಕ್ ಕಿರಿಕಿರಿ ಆದರೆ, ಮತ್ತೊಂದು ಕಡೆ ಪಾರ್ಕಿಂಗ್ ಸಮಸ್ಯೆ.. ಇಡೀ ಬೆಂಗಳೂರು ಸುತ್ತಿದರು ಸಹ ಪಾರ್ಕಿಂಗ್ ಸಿಗೋದು ದೊಡ್ಡ ವಿಷಯ. ಆದರೆ ಇದೀಗ ಬ್ರಾಂಡ್ ಬೆಂಗಳೂರು ಕನಸು ಹೊಂದಿರುವ ಬಿಬಿಎಂಪಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ಹಾಗೂ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕಲು ಗಾಂಧಿನಗರದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಿದ್ದು, ಇಂದು ಡಿಸಿಎಂ ಡಿ.ಕೆ ಶಿವಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿ ಇನ್ನಿತರರು ಲೋಕಾರ್ಪಣೆ ಮಾಡಿದರು. 

ಕಾಮಗಾರಿ ಮುಗಿದು ಎರಡು ವರ್ಷವಾದರೂ ಉದ್ಘಾಟನೆ ಕಾಣದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ಇಂದು ಲೋಕಾರ್ಪಣೆ ಕಂಡಿದ್ದು, ಇಂದಿನಿಂದ ಜನರ ಸೇವೆಗೆ ಲಭ್ಯವಿದೆ. 2022ರಲ್ಲಿ ಬಿಬಿಎಂಪಿ ನಗರೋತ್ಥಾನ ಯೋಜನೆಯಡಿ 78 ಕೋಟಿಯಲ್ಲಿ ಈ ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸೊಲ್ಯೂಷಾನ್ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್ ನಿಂದ ಕಾಂಪ್ಲೆಕ್ಸ್ ನಿರ್ವಹಣೆ ಗೊಂಡಿತ್ತು. ಈ ಪಾರ್ಕಿಂಗ್ ಕಾಂಪ್ಲೆಕ್ಸ್ ನಲ್ಲಿ 600 ಕಾರುಗಳು ಹಾಗೂ 75 ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. 

ಇನ್ನು , ಪಾರ್ಕಿಂಗ್ ಶುಲ್ಕ ನೋಡುವುದಾದರೆ, ಮೊದಲ ಒಂದು ಗಂಟೆವರೆಗೂ ದ್ವಿಚಕ್ರ ವಾಹನಗಳಿಗೆ 15 ರೂಪಾಯಿ ಹಾಗೂ ಕಾರ್ ಗಳಿಗೆ 25 ರೂಪಾಯಿ ನಿಗದಿ ಮಾಡಲಾಗಿದೆ. ಹಾಗೂ ಒಂದರಿಂದ ಎರಡು ಗಂಟೆವರೆಗೂ ದ್ವಿಚಕ್ರ ವಾಹನಗಳಿಗೆ 25 ರೂಪಾಯಿ ಹಾಗೂ ಕಾರ್ ಗಳಿಗೆ 40 ರೂಪಾಯಿ. ಇದೇ ರೀತಿ ಪ್ರತಿ ಗಂಟೆಗೂ ಶುಲ್ಕ ಹೆಚ್ಚಳ ಮಾಡಲಾಗಿದ್ದು, 10 ರಿಂದ 12 ಗಂಟೆವರೆಗೂ ವಾಹನ ಪಾರ್ಕ್ ಮಾಡಿದರೆ ದ್ವಿಚಕ್ರ ವಾಹನಕ್ಕೆ ನೂರು ರೂಪಾಯಿ ಹಾಗೂ ಕಾರುಗಳಿಗೆ 165 ನೀಡಬೇಕಾಗುತ್ತದೆ. 

ಇಲ್ಲಿ ಮತ್ತೊಂದು ಸೌಲಭ್ಯವೇನೆಂದರೆ ವಾಹನ ಪಾರ್ಕ್ ಮಾಡಿದವರಿಗೆ ಉಚಿತ ಪಿಕಪ್ ಮತ್ತು ಡ್ರಾಪ್ ಸೌಲಭ್ಯವಿದೆ. ಹೌದು ಸಿಟಿ ಸಿವಿಲ್ ಕೋರ್ಟ್, ಕೆ ಆರ್ ವೃತ್ತ್, ವಿಧಾನಸೌಧ, ಎಂ ಎಸ್ ಬಿಲ್ಡಿಂಗ್, ಹೈ ಕೋರ್ಟ್, ಪೊಥೀಸ್ ಸರ್ಕಲ್, ಚಿಕ್ಕಪೇಟೆ ಮೆಟ್ರೋ ನಿಲ್ದಾಣ, ಬಿವಿಕೆ ಅಯ್ಯಂಗಾರ್ ರಸ್ತೆ, ರಾಯನ್ ಸರ್ಕಲ್ ಉಪ್ಪಾರ್ಪೇಟೆ ಪೊಲೀಸ್ ಠಾಣೆ, ಮೆಜೆಸ್ಟಿಕ್ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮಾರ್ಗಗಳಲ್ಲಿ ಉಚಿತ ಪಿಕಪ್ ಮತ್ತು ಡ್ರಾಪ್ ಸೌಲಭ್ಯವಿದೆ. ಇದಿಷ್ಟೇ ಅಲ್ಲದೆ ಉಚಿತ ವೈಫೈ, ಶೌಚಾಲಯ, ಕುಡಿಯುವ ನೀರು , ಇವಿ ಚಾರ್ಜಿಂಗ್ ಕಾಫಿ ಶಾಪ್ , ವೀಲ್ ಚೇರ್ , ಎಸ್ ಓ ಎಸ್, ಆಂಬುಲೆನ್ಸ್ ಸೇವೆ ಕೂಡ ಲಭ್ಯವಿದೆ.