ಇತಿಹಾಸ ಬರೆಯುವ ತವಕದಲ್ಲಿ ಟೀಂ ಇಂಡಿಯಾ

ಇತಿಹಾಸ ಬರೆಯುವ ತವಕದಲ್ಲಿ ಟೀಂ ಇಂಡಿಯಾ

ಕೇಪ್​ಟೌನ್: ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಕೊನೆಯ, ಮೂರನೇ ಟೆಸ್ಟ್ ಪಂದ್ಯವು ಕೇಪ್​ಟೌನ್​ನಲ್ಲಿ ನಡೆಯಲಿದೆ. ಈಗಾಗಲೇ ಸರಣಿಯಲ್ಲಿ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿವೆ. ಇಂದಿನ ಪಂದ್ಯ ಗೆದ್ದು ಸರಣಿ ಕೈ ವಶಪಡಿಸಿಕೊಳ್ಳುವ ತವಕದಲ್ಲಿ ಎರಡೂ ತಂಡಗಳಿವೆ. ಸ್ನಾಯು ಸೆಳೆತದಿಂದ ಎರಡನೇ ಟೆಸ್ಟ್ ಮಿಸ್ ಮಾಡಿಕೊಂಡಿದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಇಂದಿನ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಭಾರತ ಈ ಪಂದ್ಯವನ್ನು ಗೆದ್ದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಸಾಧನೆ ದಾಖಲಾಗಿದೆ.