ಬಿಜೆಪಿ ಜೆಡಿಎಸ್ ನಾಯಕರಿಂದ ಮೈತ್ರಿ ಸೀಟು ಹಂಚಿಕೆಯ ಸಭೆ

ಬೆಂಗಳೂರು: ಬಿಜೆಪಿ ಜೆಡಿಎಸ್ ನಾಯಕರಿಂದ ಮೈತ್ರಿ ಸೀಟು ಹಂಚಿಕೆಯ ಸಭೆ ನಗರದ ಡಾಲರ್ಸ್ ಕಾಲೋನಿಯ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲಿ ನಡೆದಿದೆ.
ಸಭೆಗೆ ಜೆಡಿಎಸ್ ನಾಯಕರು ಆಗಮಿಸಿದ್ದಾರೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ್, ಜಿಟಿ ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಎಸ್.ಎಲ್. ಭೋಜೇಗೌಡ ಆಗಮಿಸಿದ್ದು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ್ ಬರಮಾಡಿಕೊಂಡರು.