ಭೂಪರಿವರ್ತನೆ ಸಮಸ್ಯೆ ಪರಿಹಾರಕ್ಕಾಗಿ ಶೀಘ್ರ ಸಭೆ: ಸಚಿವ ಭೈರತಿ ಬಸವರಾಜ್

ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಪಟ್ಟಣಗಳಲ್ಲಿ ಭೂ ಪರಿವರ್ತನೆ ಸಂಬಂಧಿಸಿದ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು ಅವರು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ರವರ ಗಮನ ಸೆಳೆಯುವ ಸೂಚನೆಯಡಿ ಉತ್ತರಿಸಿದ ಸಚಿವರು ಮಹಾನಗರ ಯೋಜನೆಯ ನಕ್ಷೆ ಸಿದ್ಧವಾಗುತ್ತಿದೆ. ಹೀಗಾಗಿ ಭೂಪರಿವರ್ತನೆ ಪ್ರಕ್ರಿಯೆಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ ನಕ್ಷೆ ಸಿದ್ಧಪಡಿಸುವ ಕಾರ್ಯ ಪೂರ್ಣಗೊಂಡ ಬಳಿಕ ಭೂ ಪರಿವರ್ತನೆ ಕಾರ್ಯ ಸರಾಗವಾಗಲಿದೆ ಎಂದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಬಂಟ್ವಾಳ ಸುಳ್ಯ ಬೆಳ್ತಂಗಡಿ ವಿಟ್ಲ ಮೊದಲಾದ ಕಡೆಗಳಲ್ಲಿ ಭೂಪರಿವರ್ತನೆ ಸಾಧ್ಯವಾಗುತ್ತಿಲ್ಲ ಅದಕ್ಕೆ ಬೇಕಾದ ನಿರಾಪೇಕ್ಷಣ ಪತ್ರ ಸಿಗುತ್ತಿಲ್ಲ ಇದರಿಂದ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ ಹಾಗೂ ಭೂಮಿ ಪರಭಾರೆ ಕಷ್ಟವಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.