ದ್ವಿತೀಯ ಪಿಯು ಖಾಸಗಿ ಕಾಲೇಜು ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ದಿನಾಂಕ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ಖಾಸಗಿ ಕಾಲೇಜಿನ ಅನುತ್ತೀರ್ಣ ಹಾಗೂ ಪರೀಕ್ಷೆ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕ ಸಂದಾಯ ಮಾಡಲು ದಿನಾಂಕ ಮಾರ್ಚ್ 9ರಿಂದ 12ರವರಿಗೆ ಅವಕಾಶ ನೀಡಲಾಗಿದೆ. ಪರೀಕ್ಷೆಯ ಹೊಸ ವೇಳಾಪಟ್ಟಿ ಪ್ರಕಟವಾದ ಹಿನ್ನೆಲೆಯಲ್ಲಿ ದಿನಾಂಕ ವಿಸ್ತರಿಸಲಾಗಿದೆ. ದಂಡ ಶುಲ್ಕ 500 ರೂ ಹಾಗೂ ವಿಶೇಷ ದಂಡ ಶುಲ್ಕ 700 ರೂ. ನಿಗದಿ ಮಾಡಲಾಗಿದೆ.