ಪ್ರೊ ಕಬಡ್ಡಿ : ಪ್ಲೇ-ಆಫ್ ಗೆ ಬೆಂಗಳೂರು ಬುಲ್ಸ್ ಪ್ರವೇಶ

ಬೆಂಗಳೂರು : ಪ್ರೊ ಕಬಡ್ಡಿ 8 ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಪ್ಲೇ-ಆಫ್ ಗೆ ಪ್ರವೇಶಿಸಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸಿದೆ. ಭರತ್ ಮತ್ತು ನಾಯಕ ಪವನ್ ಶೆರಾವತ್ ಅವರ ಅಮೋಘ ಸೂಪರ್ ಟೆನ್ ಸಾಧನೆಯ ಬಲದಿಂದ ಬೆಂಗಳೂರು ಬುಲ್ಸ್ ಭರ್ಜರಿ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿ ಇಟ್ಟುಕೊಂಡಿದೆ. ವೈಟ್ ಫೀಲ್ಡ್ ನ ಹೋಟೆಲ್ ಶೆರಟಾನ್ ಗ್ರ್ಯಾಂಡ್ ನಲ್ಲಿ ನಡೆದ ಟೂರ್ನಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಗೆ ಸೋಲುಣಿಸಿದೆ. ಬೆಂಗಳೂರು ಪರ ರೈಡರ್ ಭರತ್ (15 ಅಂಕ), ನಾಯಕ ಪವನ್ ಸೆಹ್ರಾವತ್ (10 ಅಂಕ) ಅವರ ಭರ್ಜರಿ ಆಟ ಬುಲ್ಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಇದು 20 ಪಂದ್ಯಗಳಲ್ಲಿ ಬುಲ್ಸ್ ಕಂಡ 10ನೇ ಜಯ.