ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಪುನರಾಯ್ಕೆ

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಪುನರಾಯ್ಕೆ

ಹುಬ್ಬಳ್ಳಿ: ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಹಾಗೂ ಬೆಂಗಳೂರು ನಗರ ಪದಾಧಿಕಾರಿಗಳ ತಂಡದ ಪುನರ್‌ ರಚನೆಯಾಗಿದೆ. ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಹಾಗೂ ನಗರಾಧ್ಯಕ್ಷರಾಗಿ ಮೋಹನ್‌ ದಾಸರಿ ಪುನರಾಯ್ಕೆ ಆಗಿದ್ದಾರೆ. ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನಿರ್ದೇಶನದಂತೆ ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆಯವರು ರಾಜ್ಯ ಪದಾಧಿಕಾರಿಗಳ ತಂಡದ ಪುನಾರಚನೆ ಮಾಡಿದ್ದಾರೆ. ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಹಾಗೂ ವಿಜಯ್‌ ಶರ್ಮಾರವರನ್ನು ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. 

ಸಂಚಿತ್‌ ಸಹಾನಿಯವರು ರಾಜ್ಯ ಪ್ರಧಾನ ಕಾರ್ಯದರ್ಶಿ, ಹರಿಹರನ್‌ರವರು ರಾಜ್ಯ ಖಜಾಂಚಿ, ಜಗದೀಶ್ ವಿ ಸದಂ ರಾಜ್ಯ ಮಾಧ್ಯಮ ಉಸ್ತುವಾರಿಗಳಾಗಿ , ಕೆ. ಮಥಾಯ್ ರಾಜ್ಯವಕ್ತಾರ ಹುದ್ದೆಗೆ ನೇಮಕಗೊಂಡಿದ್ದಾರೆ. ರಾಜ್ಯ ಕಾರ್ಯದರ್ಶಿಗಳಾಗಿ ಎಚ್.ಡಿ.ಬಸವರಾಜು, ಡಾ. ವೆಂಕಟೇಶ್‌, ಬಿ.ಟಿ.ನಾಗಣ್ಣ, ಲಕ್ಷ್ಮೀಕಾಂತ್‌ ರಾವ್‌, ಶಾಂತಲಾ ದಾಮ್ಲೆ ನೇಮಕಗೊಂಡಿದ್ದಾರೆ. ರಾಜ್ಯ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ದರ್ಶನ್‌ ಜೈನ್‌ ಹಾಗೂ ವಿವೇಕಾನಂದ ಸಾಲಿನ್ಸ್‌ರವನ್ನು ನೇಮಿಸಲಾಗಿದೆ. ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.