ರಂಗಪಂಚಮಿ ಪ್ರಯುಕ್ತ ಚಿಗರಿ ಕಾರ್ಯಾಚರಣೆ ಇಲ್ಲ: ಸಂಜೆ 5ರ ನಂತರವೇ ಕಾರ್ಯಾರಂಭ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾರ್ಚ್ 11ರಂದು ರಂಗಪಂಚಮಿ ಪ್ರಯುಕ್ತವಾಗಿ ಒಂದು ದಿನ ಚಿಗರಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವಿನ ಚಿಗರಿ ಕಾರ್ಯಾಚರಣೆ ಇರುವುದಿಲ್ಲ. ಸಂಜೆ 5ರ ಬಳಿಕ ಜನರ ಅಗತ್ಯಕ್ಕೆ ಅನುಗುಣವಾಗಿ ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂದು ಬಿ.ಆರ್.ಟಿ.ಎಸ್ ವ್ಯವಸ್ಥಾಪಕರು ಪ್ರಕಟಣೆ ತಿಳಿಸಿದ್ದಾರೆ.