ಮೋದಿ ಆಯುಷ್ಯ ವೃದ್ಧಿಗಾಗಿ ಇಂದು ಬೃಹತ್ ಯಾಗ: ಧರ್ಮಸ್ಥಳದಲ್ಲಿ ರೆಡಿಯಾಗಿದೆ ದೊಡ್ಡ ಜಾಗ

ಮೋದಿ ಆಯುಷ್ಯ ವೃದ್ಧಿಗಾಗಿ ಇಂದು ಬೃಹತ್ ಯಾಗ: ಧರ್ಮಸ್ಥಳದಲ್ಲಿ ರೆಡಿಯಾಗಿದೆ ದೊಡ್ಡ ಜಾಗ

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ಮಹಾಮೃತ್ಯುಂಜಯ ಯಾಗ ನಡೆಯಲಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಇಂದು ಸೋಮವಾರ ಯಾಗ ನೆರವೇರಲಿದೆ. ಇತ್ತೀಚೆಗೆ ಪಂಜಾಬ್ ನಲ್ಲಿ ಪ್ರಧಾನಿ ಮೋದಿ ಪ್ರಯಾಣದ ವೇಳೆ ಭದ್ರತಾಲೋಪ ಎಸಗಲಾಗಿತ್ತು. ಹೀಗಾಗಿ ಪ್ರಧಾನಿ ಮೋದಿ‌ ಜೀವಕ್ಕೆ ಅಪಾಯ ಎದುರಾದ ಹಿನ್ನೆಲೆ ಧರ್ಮಸ್ಥಳದಲ್ಲಿ ಮಹಾಮೃತ್ಯುಂಜಯ ಯಾಗ ಮಾಡಲಿದ್ದಾರೆ. ಕರಾವಳಿ ವಿವಿಧೆಡೆಯ 200ಕ್ಕೂ ಅರ್ಚಕರು ಈ ಯಾಗವನ್ನು ನಡೆಸಿಕೊಡಲಿದ್ದಾರೆ. ಈಗಾಗಲೇ ಹರೀಶ್ ಪೂಂಜಾ ನೇತೃತ್ವದಲ್ಲಿ ಬೆಳ್ತಂಗಡಿಯ 25 ಕ್ಷೇತ್ರಗಳಲ್ಲಿ ಯಾಗ ಮಾಡಲಾಗಿದೆ. ಈ ಎಲ್ಲಾ ಯಾಗಗಳ ಪೂರ್ಣಾಹುತಿ ನೆಲೆಯಲ್ಲಿ ಧರ್ಮಸ್ಥಳದಲ್ಲಿ ಮಹಾಮೃತ್ಯುಂಜಯ ಯಾಗ ನಡೆಯಲಿದೆ. ಮೋದಿ ಹೆಸರಲ್ಲಿ ನಡೆಯುವ ಯಾಗಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯೂ ಬೆಂಬಲ ಸೂಚಿಸಿದ್ದು, ಈಶ್ವರಪ್ಪ, ಸಿ.ಸಿ.ಪಾಟೀಲ್ ಸೇರಿ ಹಲವು ಸಚಿವರು, ಶಾಸಕರು ಈ ಯಾಗದಲ್ಲಿ ಭಾಗಿಯಾಗಲಿದ್ದಾರೆ.