ಗೌರವ ಡಾಕ್ಟರೇಟ್ ನಿರಾಕರಿಸಿದ ಸಚಿವ ಸತೀಶ್ ಜಾರಕಿಹೊಳಿ

ಗೌರವ ಡಾಕ್ಟರೇಟ್ ನಿರಾಕರಿಸಿದ ಸಚಿವ ಸತೀಶ್ ಜಾರಕಿಹೊಳಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU), ಮೈಸೂರಿನಿಂದ ನೀಡಲಾಗಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. 

ವಿಶ್ವವಿದ್ಯಾನಿಲಯದ ಉಪಕುಲಪತಿಗೆ ಪತ್ರ ಬರೆದಿರುವ ಅವರು, "ನನ್ನ ಮೇಲೆ ಇನ್ನೂ ಸಾಕಷ್ಟು ಸಾಮಾಜಿಕ ಜವಾಬ್ದಾರಿಗಳಿವೆ. ಅವುಗಳನ್ನು ನಿರ್ವಹಿಸಲು ಹೆಚ್ಚಿನ ಕಾಲಾವಕಾಶ ಬೇಕು" ಎಂದು ತಿಳಿಸಿದ್ದಾರೆ. 

"2025ರ ಮಾರ್ಚ್ 27ರಂದು ನನಗೆ ' ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಿದ್ದಕ್ಕಾಗಿ ನಾನು ವಿಶ್ವವಿದ್ಯಾನಿಲಯಕ್ಕೆ ಧನ್ಯವಾದಗಳು ಸಲ್ಲಿಸುತ್ತೇನೆ. ಈ ಗೌರವ ನನ್ನ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಾನು ಕೈಗೊಂಡಿರುವ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಇನ್ನೂ ಹೆಚ್ಚಿನ ಶ್ರಮ ಮತ್ತು ಸಮಯ ಅಗತ್ಯವಿದೆ." "ಈ ಹಿನ್ನಲೆಯಲ್ಲಿ, ತಾವು ನೀಡಿದ ಗೌರವ ಪದವಿಯನ್ನು ಹಿಂಪಡೆಯಲು ನಾನು ವಿನಂತಿಸುತ್ತೇನೆ. ನನ್ನ ಈ ನಿರ್ಧಾರವನ್ನು ವೈಯಕ್ತಿಕವಾಗಿ ಹಾಗೂ ಸದಭಿಪ್ರಾಯದೊಂದಿಗೆ ತೆಗೆದುಕೊಂಡಿದ್ದೇನೆ. ಇದನ್ನು ಅನ್ಯಥಾ ಅರ್ಥೈಸಬಾರದು," ಎಂದು ಅವರು ಪತ್ರದ ಕೊನೆಯಲ್ಲಿ ತಿಳಿಸಿದ್ದಾರೆ.