ವಿಧಾನಮಂಡಲದ ಅಧಿವೇಶನ ಜು.21ರ ವರೆಗೆ ಮುಂದುವರಿಕೆ

ಬೆಂಗಳೂರು : ನಿನ್ನೆ ತಾನೆ ಆರಂಭಗೊಂಡ ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ ಈ ತಿಂಗಳ 14 ರ ಬದಲಾಗಿ ಜುಲೈ 21ರ ವರಡಗೆ ಮುಂದುವರಿಯಲಿದೆ.
ಇಂದು ವಿಧಾನಸಭೆಯ ಕಲಾಪದ ಮಧ್ಯೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಜುಲೈ 5 ರಂದು ಈಗಾಗಲೆ ಸ್ವೀಕರಿಸಿದ ವಿಧೇಯಕಗಳ ಮಂಡನೆಯಾಗಲಿದೆ ಎಂದರು. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆ, ಜುಲೈ 6ರಂದು ಬೆಳಿಗ್ಗೆ ನಡೆಯಲಿದೆ.
ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡಲಿದ್ದಾರೆ. ಇನ್ನು, ಜುಲೈ 7ರಂದು ಮುಖ್ಯಮಂತ್ರಿಯವರು 2023-24ನೇ ಸಾಲಿನ ರಾಜ್ಯ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಜುಲೈ 10ರಿಂದ 19ರವೆಗೆ ಇಲಾಖಾವಾರು ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು. ಜುಲೈ 20ರಂದು ಹಣಕಾಸು ವಿಧೇಯಕಗಳ ಅಂಗೀಕಾರವಿರಲಿದೆ ಎಂದುನ ಸ್ಪೀಕರ್ ಅವರು ತಿಳಿಸಿದರು.