ರಾಜ್ಯದಲ್ಲಿಂದು 33 ಸಾವಿರ ಸಮೀಪಿಸಿದ ಕೊರೊನಾ ಕೇಸ್‌, ಪಾಸಿಟಿವಿಟಿ ದರ ಶೇ 15ಕ್ಕೆ ಏರಿಕೆ.!

ರಾಜ್ಯದಲ್ಲಿಂದು 33 ಸಾವಿರ ಸಮೀಪಿಸಿದ ಕೊರೊನಾ ಕೇಸ್‌, ಪಾಸಿಟಿವಿಟಿ ದರ ಶೇ 15ಕ್ಕೆ ಏರಿಕೆ.!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಪಾಸಿಟಿವಿಟಿ ದರವು ದಾಖಲೆಯ ರೀತಿ ಏರಿಕೆ ಕಾಣುತ್ತಿದೆ. ಇದರಿಂದಾಗಿ ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚುತ್ತಿದೆ. ರಾಜ್ಯದಲ್ಲಿಂದು 32,793 ಜನರಿಗೆ ಸೋಂಕು ಅಂಟಿದೆ. ಇದರಲ್ಲಿ ಬೆಂಗಳೂರು ಮಹಾನಗರದಲ್ಲಿ 22,284 ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಇಂದು ಕೊರೊನಾ ಪಾಸಿಟಿವಿಟಿ ದರವು ಶೇ 15ಕ್ಕೆ ಏರಿಕೆ ಕಂಡಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಇಂದು 4,273 ಜನ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ 1,69,850 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಹಾಗೂ ಬೆಂಗಳೂರಿನಲ್ಲಿ 1 ಲಕ್ಷ 29 ಸಾವಿರ ಸಕ್ರಿಯ ಪ್ರಕರಣಗಳಿವೆ. ಇನ್ನು ರಾಜ್ಯದಾದ್ಯಂತ ಇಂದು 7 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಅದರಲ್ಲಿ ಐವರು ಬೆಂಗಳೂರಿನವರಾಗಿದ್ದಾರೆ. ಇನ್ನು 2,18,479 ಜನರನ್ನು ಕೊರೊನಾ ಪಾಸಿಟಿವಿಟಿ ಪತ್ತೆಗಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು.