India vs South Africa 1st Test: ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಜಯ

India vs South Africa 1st Test: ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಜಯ

2021 ಭಾರತದ ಟೆಸ್ಟ್‌ ಕ್ರಿಕೆಟ್‌ಗೆ ಅತ್ಯಂತ ಅದ್ಭುತ ವರ್ಷವಾಗಿ ಪರಿಣಮಿಸಿದೆ. ಈ ವರ್ಷದ ಆರಂಭದಲ್ಲಷ್ಟೇ ಟೀಮ್ ಇಂಡಿಯಾ ಆಸ್ಟ್ರೇಲಿಯಾದ ಗಬ್ಬಾ ಕೋಟೆಯನ್ನ ಭೇದಿಸಿತು. ಕಳೆದ 32 ವರ್ಷಗಳಲ್ಲಿ ಆ ಪಿಚ್‌ನಲ್ಲಿ ಕಾಂಗರೂಗಳನ್ನ ಯಾರೂ ಸೋಲಿಸಲು ಸಾಧ್ಯವಾಗಿರಲಿಲ್ಲ. ಆದ್ರೆ ಭಾರತ ಐತಿಹಾಸಿಕ ಗೆಲುವನ್ನ ಪಡೆಯಿತು. ಇದಾದ ಬಳಿಕ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಗೆಲುವು ಸಾಧಿಸಿತು.

ಕೇವಲ ಗಬ್ಬಾದಲ್ಲಿ ಐತಿಹಾಸಿಕ ಗೆಲುವಷ್ಟೇ ಅಲ್ಲದೆ, ಇಂಗ್ಲೆಂಡ್‌ನ ಓವಲ್‌ನಲ್ಲಿ 50 ವರ್ಷಗಳ ನಂತರ ಭಾರತವು ಪಂದ್ಯವನ್ನ ಗೆದ್ದು ಬೀಗಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ ತಲುಪಿತು. ಇದಾದ ಬಳಿಕ ಸೆಂಚುರಿಯನ್ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ ಮೊಟ್ಟ ಮೊದಲ ಬಾರಿಗೆ ಸೋಲಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-0 ಮುನ್ನಡೆ ಸಾಧಿಸಿದೆ.